“ಜೆಮ್ಸ್‌” ಖ್ಯಾತಿಯ ಚೇತನ್‌ ನಿರ್ದೇಶನದಲ್ಲಿ , “ಗಟ್ಟಿಮೇಳ” ಖ್ಯಾತಿಯ ರಕ್ಷ್‌ ರಾಮ್‌ !

masthmagaa.com:

ಬಹದ್ದೂರ್, ಭರ್ಜರಿ, ಭರಾಟೆ ಮತ್ತು ಜೇಮ್ಸ್ ಮೂವಿಗಳನ್ನ ನಿರ್ದೇಶನ ಮಾಡಿದ ಚೇತನ್ ಕುಮಾರ್ ಈಗ ಮತ್ತೊಂದು ಸಿನಿಮಾ ಮಾಡೋದಕ್ಕೆ ಕೈ ಹಾಕಿದ್ದಾರೆ. ಗಟ್ಟಿಮೇಳ ಖ್ಯಾತಿಯ ರಕ್ಷ್‌ ರಾಮ್‌ ನಟಿಸಲಿರುವ ಹೊಸ ಚಿತ್ರದ ಹೆಸರು ಬರ್ಮ.

ಬರ್ಮ ಅನ್ನೋ ಚಿತ್ರ ಟೈಟಲ್ ಕೂಡ ಕುತೂಹಲ ಮೂಡಿಸಿದೆ. ‘ಬರ್ಮ’ ಅಂದ್ರೆ ಬ್ರಹ್ಮ ವಾಸಿಸುವ ಜಾಗ ಅಂತ ಚಿತ್ರತಂಡ ಹೇಳಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿದೆ ಅನ್ನೋದು ವಿಶೇಷ. ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಮೊದಲು ಚೇತನ್ ಹಾಗೂ ಹರಿಕೃಷ್ಣ ಅವರು ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಮೂರನೇ ಬಾರಿಗೆ ಈ ಜೋಡಿ ಒಂದಾಗಿದೆ.

ಸೆಪ್ಟೆಂಬರ್ ತಿಂಗಳಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯ ಹೀರೋನ ಪರಿಚಯವನ್ನು ಮಾತ್ರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ.

-masthmagaa.com

Contact Us for Advertisement

Leave a Reply