ಏಷ್ಯಾ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಅಂಪೈರ್‌ ಜೊತೆ ಸಿಂಧೂ ಕಿರಿಕ್!‌

masthmagaa.com:

ಇಂದು ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಪಿವಿ ಸಿಂಧೂ ಹಿನ್ನಡೆ ಅನುಭವಿಸಿದ್ದಾರೆ. 3 ಸುತ್ತುಗಳಲ್ಲಿ ನಡೆದ ಈ ಮ್ಯಾಚ್‌ನಲ್ಲಿ ಜಾಪಾನ್‌ನ ಯಮಗುಚಿ ವಿರುದ್ದ ಸೋತು ಕಂಚಿನ ಪದಕಕ್ಕೆ ಸಮಾಧಾನ ಪಟ್ಟಿದ್ದಾರೆ. ಹಾಗೂ ಮ್ಯಾಚ್‌ ವೇಳೆ ಅಂಪೈರ್‌ ಜೊತೆ ಜಗಳ ಕೂಡ ಆಗಿದೆ. ಸಿಂಧೂ ಸರ್ವ್‌ ಮಾಡೋಕೆ ಜಾಸ್ತಿ ಟೈಮ್‌ ತಗೊಂಡ್ರು ಅಂತ ಪಾಯಿಂಟ್ ಪೆನಾಲ್ಟಿ ನೀಡಲಾಯ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಧೂ ತನ್ನ ಎದುರಾಳಿ ಸಿದ್ಧವಿಲ್ಲದ ಕಾರಣ ಸರ್ವ್ ಮಾಡೋಕೆ ಸಮಯ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಆದ್ರೆ ಅವ್ರ ಮನವಿಯನ್ನ ಅಂಪೈರ್‌ ಸ್ವೀಕರಿಸಲಿಲ್ಲ.

-masthmagaa.com

Contact Us for Advertisement

Leave a Reply