ಪಾಕಿಸ್ತಾನಕ್ಕೆ F-16 ಪ್ಯಾಕೇಜ್‌: ಸಮರ್ಥನೆ ಮಾಡಿಕೊಂಡ ಅಮೆರಿಕ ಹೇಳಿದ್ದೇನು? ನೀವೆ ನೋಡಿ!

masthmagaa.com:

ಪಾಕಿಸ್ತಾನಕ್ಕೆ F-16 ಯುದ್ದಪ್ಯಾಕೇಜ್‌ನ್ನ ಕೊಡೋದ್ರ ಕುರಿತು ಭಾರಿ ಚರ್ಚೆ ಎದ್ದಿರೋ ಹೊತ್ತಲ್ಲೇ ಅಮೆರಿಕ ಇದಕ್ಕೆ ಸ್ಪಷ್ಟನೆ ನೀಡಿದೆ. ಇದು ನಾವು ಪಾಕಿಸ್ತಾನಕ್ಕೆ ಕೊಡ್ತಿರೋ ಸಹಾಯ ಅಲ್ಲ. ಮಾರಾಟ ಅಂತ ತನ್ನ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡಿದೆ. F-16 ಮೇಲ್ದರ್ಜೆಗೆ ಏರಿಸೋಕೆ ಅಂತ ಅಮೆರಿಕ ಪಾಕಿಸ್ತಾನಕ್ಕೆ ಕೊಡ್ತಿದ್ದ ಭದ್ರತಾ ನೆರವನ್ನು ಡೋನಾಲ್ಡ್‌ ಟ್ರಂಪ್‌ ತಮ್ಮ ಅಧಿಕಾರವಧಿಯಲ್ಲಿ ಸ್ಥಗಿತಗೊಳಿಸಿದ್ರು. ಇದೀಗ ಟ್ರಂಪ್‌ರ ಈ ಆದೇಶವನ್ನು ರದ್ದುಗೊಳಿಸಿ, ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಫೈಟರ್ ಜೆಟ್‌ನ ಬಿಡಿ ಭಾಗಗಳನ್ನು ನೀಡಲು ಮುಂದಾಗಿದೆ. ಇದಕ್ಕೆ ಭಾರತ ಸರ್ಕಾರ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ರೂ ಕೂಡ, ಮಾಜಿ ರಾಜತಾಂತ್ರಿಕರು, ಹಾಗೂ ರಕ್ಷಣಾ ತಜ್ಞರು ಅಮೆರಿಕದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಅಸಿಸ್ಟೆಂಟ್‌ ಸ್ಟೇಟ್‌ ಸೆಕ್ರಟ್ರಿ ಡೋನಾಲ್ಡ್‌ ಲೂ ಮಾತನಾಡಿದ್ದಾರೆ. ನಾವು ಬೇರೆ ದೇಶಗಳಿಗೆ ಒದಗಿಸಿರೋ ನಮ್ಮ ಯುದ್ದ ಸಾಮಾಗ್ರಿಗಳಿಗೆ ಪೂರಕವಾದ ಸಹಾಯ ಮಾಡೋದು ಅಂದ್ರೆ ಅವರ ಮೇಂಟೇನೆಸ್‌ಗೆಲ್ಲಾ ನಾವು ಹೆಲ್ಪ್‌ ಮಾಡೋದು ನಮ್ಮ ನೀತಿ. ಇದನ್ನ ಅಮೆರಿಕ ವಿಶ್ವವ್ಯಾಪಿ ಪಾಲಿಸಿಕೊಂಡು ಬರ್ತಾಯಿದೆ. ಪಾಕಿಸ್ತಾನದ ಬಗ್ಗೆ ಹೇಳಬೇಕೆಂದರೆ, ಇದು ಕೇವಲ ಬಿಡಿ ಭಾಗಗಳು ಹಾಗೂ ನಿರ್ವಹಣೆ ಮಾಡೋದಕ್ಕೆ ಮಾಡ್ತಿರೋ ಪೂರೈಕೆಯಾಗಿದೆ. ಇದು ಮಾರಾಟವಾಗಿದ್ದು, ಯಾವುದೇ ಸಹಾಯ ಅಲ್ಲ. ಈ ವಿಮಾನಗಳು ವಾಯು ಸುರಕ್ಷತೆಯ ಮಾನದಂಡಗಳನ್ನು ಪೂರೈಸೋಕೆ ಅಂದ್ರೆ ಈ ವಿಮಾನಗಳು ಸೇಫ್‌ ಅಂತ ಹೇಳೋಕೆ ನಾವು ನಮ್ಮ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಭಾರತದ ಕಳವಳವನ್ನ ನಾವು ಗಮನಿಸಿದ್ದೇವೆ. ಇದು ಯುದ್ದವಿಮಾಗಳ ಸೇಪ್ಟಿ ಮತ್ತು ಮೇಂಟೆನೇಸ್‌ ಪ್ರೋಗ್ರಾಂ ಅಷ್ಟೇ. ಯಾವುದೇ ಹೊಸ ವಿಮಾನವನ್ನಾಗಲಿ, ಹೊಸ ಸಾಮರ್ಥ್ಯ ಮತ್ತು ಹೊಸ ಶಸ್ತ್ರಾಸ್ತ್ರಗಳನ್ನಾಗಲಿ ನಾವು ಅವರಿಗೆ ನೀಡ್ತಾ ಇಲ್ಲ ಅಂತ ಹೇಳಿದ್ದಾರೆ. ಆದ್ರೆ ಅಮೆರಿಕ ಇಷ್ಟೆಲ್ಲಾ ಸಮರ್ಥನೆ ಕೊಟ್ರು ಕೂಡ ಇಲ್ಲಿ ಅವರು ಆಡ್ತಿರೋದು ಡಬಲ್‌ ಗೇಮ್‌ ಅಂತ ಎಲ್ಲರಿಗೂ ಗೊತ್ತು. ಯಾಕಂದ್ರೆ ಭೀಕರ ಪ್ರವಾಹ, ಕುಸೀತಾ ಇರೋ ಆರ್ಥಿಕತೆ, ಬೆಲೆ ಏರಿಕೆ ಸಮಸ್ಯೆಗಳಿಂದ ಊಟಕ್ಕೂ ಪರದಾಡ್ತಿರೋ ಪಾಕಿಸ್ತಾನ ಈಗ ಅಮೆರಿಕಗೆ ನಮ್ಮ ವಿಮಾನಗಳನ್ನ ಅಪ್‌ಗ್ರೇಡ್‌ ಮಾಡಿ ಅಂತ ಅವರ ಹತ್ರ ಕೇಳಿ ಕೊಂಡಿದ್ರಾ. ಮೊದಲೇ ಟೀ ಕುಡಿಯೋದನ್ನ ಕಡಿಮೆ ಮಾಡಿ, ದುಡ್ಡು ಉಳಿಸೋಣ ಅಂತ ತಮ್ಮ ಜನರ ಹತ್ರ ಪಾಕ್‌ ಸರ್ಕಾರ ಮನವಿ ಮಾಡಿದೆ. ಅಂತದ್ರಲ್ಲಿʻಈಗ ಅರ್ಜೆಂಟಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಿಲಿಟರಿ ಶಸ್ತ್ರಾಸ್ತ್ರಗಳ ಒಪ್ಪಂದ ಮಾಡಿಕೊಳ್ಳೋಕೆ ಪಾಕ್‌ ಸರ್ಕಾರ ಮುಂದಾಗಿದ್ಯಾ ಅನ್ನೋದು ಅಮೆರಿಕವನ್ನ ಎಲ್ರೂ ಕೇಳ್ತಿರೋ ಪ್ರಶ್ನೆ.

-masthmagaa.com

Contact Us for Advertisement

Leave a Reply