ಚೀನಾಗೆ ಅಮೆರಿಕ ಸೇನೆಯ ರಹಸ್ಯ ಮಾಹಿತಿ ನೀಡ್ತಿದ್ದ ಸೈನಿಕನ ಬಂಧನ!

masthmagaa.com:

ಅಮೆರಿಕನ್ ಸೇನೆಯ ರಹಸ್ಯ ಮಾಹಿತಿಯನ್ನ ಚೀನಾಗೆ ನೀಡಿದ್ದ ಆರೋಪದ ಮೇಲೆ ಇದೇ ಅಮೆರಿಕದ ಸೈನಿಕನೊಬ್ಬನನ್ನ ಬಂಧಿಸಲಾಗಿದೆ. ಈ ಆರೋಪಿಯನ್ನ US ಆರ್ಮಿ ಸಾರ್ಜೆಂಟ್‌ ʻಕೊರ್ಬಿನ್‌ ಷುಲ್ಟ್ಜ್‌ʼ ಅಂತ ಗುರುತಿಸಲಾಗಿದೆ. ಈತ ಗುಪ್ತಚರ ಇಲಾಖೆಯ ವಿಶ್ಲೇಷಕನಾಗಿಯು ಕೆಲ್ಸ ಮಾಡ್ತಿದ್ದನಂತೆ. ಅಲ್ದೇ ಈತ 2022ರ ಜೂನ್‌ನಿಂದ ಅಮೆರಿಕದ ಸೈನ್ಯಕ್ಕೆ ಸಂಬಂಧಿಸಿದ ಕೆಲ ಡಾಕ್ಯುಮೆಂಟ್‌ ಹಾಗೂ ಪೋಟೊಗಳನ್ನ ಚೀನಾಗೆ ಲೀಕ್‌ ಮಾಡಿದ್ದು, ಇದೀಗ ಈತನ ಮೇಲೆ ಸುಮಾರು 6 ಕೇಸ್‌ ಹಾಕಲಾಗಿದೆ. ಹೀಗಂತ ಅಮೆರಿಕದ ಕಾನೂನು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ದೇ ಈ ರಹಸ್ಯ ಮಾಹಿತಿಗಳನ್ನ ಲೀಕ್‌ ಮಾಡೋಕೆ 14 ಕಂತುಗಳಲ್ಲಿ ಸುಮಾರು 34 ಲಕ್ಷದ 83 ಸಾವಿರ ರೂಪಾಯಿ ಹಣ ಪಡೆದಿದ್ದಾನೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply