ಯುಕ್ರೇನ್‌ ವಿರುದ್ಧ ಹೋರಾಡಲು ರಷ್ಯಾಗೆ ಚೀನಾ ಬೆಂಬಲ: ಅಮೆರಿಕ

masthmagaa.com:

ರಷ್ಯಾ ಮತ್ತು ಚೀನಾ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಕ್ಲೋಸ್‌ ಆಗ್ತಿರೋದು ಗೊತ್ತಿರೋ ವಿಚಾರನೇ. ಆದ್ರೆ ಈ ಕ್ಲೋಸ್‌ನೆಸ್‌ ಎಲ್ಲಿವರೆಗೆ ಬೆಳದಿದೆ ಅಂದ್ರೆ… ಚೀನಾ ರಷ್ಯಾಗೆ ಜಿಯೋಸ್ಪೇಶಿಯಲ್‌ ಇಂಟೆಲಿಜೆನ್ಸ್‌ ಸೌಲಭ್ಯ ಒದಗಿಸ್ತಿದೆ. ಈ ಮೂಲಕ ಯುಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಚೀನಾ ಸಪೋರ್ಟ್‌ ನೀಡ್ತಿದೆ ಅಂತ ಅಮೆರಿಕ ಆರೋಪ ಮಾಡಿ ಎಚ್ಚರಿಕೆ ನೀಡಿದೆ. ರಷ್ಯಾದ ಸೇನೆಗೆ ಸಹಕಾರವಾಗ್ಲಿ ಅಂತ ಸ್ಯಾಟಲೈಟ್‌ ಚಿತ್ರಣಗಳನ್ನ ಚೀನಾ ಒದಗಿಸ್ತಿದೆ. ಯುದ್ಧ ಟ್ಯಾಂಕ್‌ಗಳಿಗೆ ಮೈಕ್ರೋ ಎಲೆಕ್ಟ್ರಾನಿಕ್ಸ್‌ ಮತ್ತು ಮಷೀನ್‌ ಟೂಲ್‌ಗಳನ್ನ ನೀಡ್ತಿದೆ ಅಂತ ಅಮೆರಿಕ ಆರೋಪಿಸಿದೆ. ಅಷ್ಟೇ ಅಲ್ದೇ ಕ್ಷಿಪಣಿಗಳಿಗೆ ಉಪಯೋಗಿಸಲಾಗೋ ಒಪ್ಟಿಕ್ಸ್‌ ಮತ್ತು ಪ್ರೊಪೆಲ್ಲೆಂಟ್‌ಗಳನ್ನ ಕೊಡ್ತಿದೆ. ರಷ್ಯಾಗೆ ಚೀನಾ ತನ್ನ ಬಾಹ್ಯಾಕಾಶ ಸಹಕಾರ ಕೂಡ ಹೆಚ್ಚಿಸಿದೆ ಅಂತ ಅಮೆರಿಕ ಹೇಳಿದೆ. ಆದ್ರೆ ಅಮೆರಿಕದ ಭದ್ರತಾ ಮಂಡಳಿ ವಕ್ತಾರರು ಈ ಬಗ್ಗೆ ಕಮೆಂಟ್‌ ಮಾಡಲು ನಿರಾಕರಿಸಿದ್ದಾರೆ. ಇನ್ನು ಚೀನಾ ಕೂಡ ಈ ಬಗ್ಗೆ ಸದ್ಯ ಯಾವ್ದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply