ಅಲೆಕ್ಸಿ ನಾವಲ್ನಿಗೆ ಮತ್ತೂ 9 ವರ್ಷ ಜೈಲು ಶಿಕ್ಷೆ!

masthmagaa.com:

ಪುಟಿನ್‌ನ ರಾಜಕೀಯ ಎದುರಾಳಿ ಅಲೆಕ್ಸಿ ನಾವಲ್ನಿಗೆ ರಷ್ಯಾ ಕೋರ್ಟ್‌ ಮತ್ತೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿಂದೆ ನಾವಲ್ನಿಯನ್ನ ವಿಷ ಕೊಟ್ಟು ಸಾಯಿಸೋಕೆ ಪ್ರಯತ್ನ ಮಾಡಲಾಗಿತ್ತು. ಅದ್ರಲ್ಲಿ ಬದುಕುಳಿದು, ಜೆರ್ಮನಿ ಇಂದ ಚಿಕಿತ್ಸೆ ಪಡೆದು ವಾಪಸ್‌ ರಷ್ಯಾಗೆ ಬಂದ ತಕ್ಷಣವೇ ಅವ್ರನ್ನ ಅರೆಸ್ಟ್‌ ಮಾಡಲಾಗಿತ್ತು. ಹಳೆ ಕೇಸ್ ಒಂದ್ರಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಮತ್ತೆ ವಂಚನೆ ಮತ್ತು ಆಸ್ತಿ ಕಳ್ಳತನ ಆರೋಪದ ಮೇಲೆ ಅವ್ರನ್ನ 9 ವರ್ಷ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗಿದೆ. ಕೋರ್ಟ್‌ ಆದೇಶ ಬಂದ ತಕ್ಷಣವೇ ನಾವಲ್ನಿ, ಪುಟಿನ್‌ ಸತ್ಯಕ್ಕೆ ಹೆದರುತ್ತಾರೆ, ನಾನು ಇದನ್ನ ಯಾವಾಗ್ಲೂ ಹೇಳ್ತಿನಿ. ಸೆನ್ಸಾರ್‌ಶಿಪ್‌ ವಿರುದ್ಧ ಹೋರಾಡೋದು, ಜನರಿಗೆ ಸತ್ಯ ಹೇಳೋದು ಯಾವಾಗ್ಲು ನಮ್ಮ ಆದ್ಯತೆ ಆಗಿರುತ್ತೆ ಅಂತ ಹೇಳಿದ್ದಾರೆ. ಇದೇ ಸಮಯದಲ್ಲಿ ಎಂದಿನಂತೆ ತಮಾಷೆ ಮಾಡಿರೋ ಅವ್ರು, ನನ್ನ ಬಾಹ್ಯಾಕಾಶ ನೌಕೆ ಟೈಮ್‌ ಲೂಪ್‌ನಲ್ಲಿ ಸಿಕ್ಕಿ ಹಾಕೊಂಡಿದೆ, ಸ್ಪೇಸ್‌ ಫ್ಲೈಟ್‌ ವಿಸ್ತಾರವಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ರಷ್ಯನ್ನರು ಈ ವಾರ್‌ ಕ್ರಿಮಿನಲ್‌ಗಳನ್ನ ವಿರೋಧಿಸಬೇಕು ಅಂತ ಕೂಡ ಹೇಳಿದ್ದಾರೆ. ನಾವಲ್ನಿಯನ್ನ ಇನ್ನೂ ಕಠಿಣ ಜೈಲಿನಲ್ಲಿ ಇಡಲಾಗುತ್ತೆ ಅಂತ ಹೇಳಲಾಗ್ತಿದೆ. ಇನ್ನು ನಾವಲ್ನಿಗೆ ಜೈಲು ಶಿಕ್ಷೆ ವಿಧಿಸಿರೋ ರಷ್ಯಾ ಕೋರ್ಟ್‌ ಆದೇಶವನ್ನ ಅಮೆರಿಕ ಖಂಡಿಸಿದ್ದು, ಇದು ಅವ್ರ ಬಾಯಿ ಮುಚ್ಚಿಸೋ ಪ್ರಯತ್ನ ಅಂತ ಹೇಳಿದೆ. ಈ ಸಂಬಂಧ ಮಾತಾಡಿರೋ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ನೆಡ್‌ ಪ್ರೈಸ್‌, ರಷ್ಯಾ ಕೋರ್ಟಿನ ಈ ನಾಟಕೀಯ ಆದೇಶ ನಾವಲ್ನಿಯ ಬಾಯಿ ಮುಚ್ಚಿಸೋ ಸರಣಿ ಪ್ರಯತ್ನಗಳಲ್ಲಿ ಒಂದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply