ವೈಟ್‌ ಹೌಸ್‌ ಗೊಂದಲ! ರಕ್ಷಣಾ ಕಾರ್ಯದರ್ಶಿಯ ಆಸ್ಪತ್ರೆ ದಾಖಲು ರಹಸ್ಯ!

masthmagaa.com:

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವ್ರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋ ಮಾಹಿತಿ ವೈಟ್‌ ಹೌಸ್‌ಗೆ ತಡವಾಗಿ ಸಿಕ್ಕಿ ಬಾರಿ ಗೊಂದಲ ಸೃಷ್ಟಿಯಾಗಿದೆ. ಹೌದು, ಆಸ್ಟಿನ್‌ ಲಾಯ್ಡ್‌ ಅವ್ರು ಹೊಸ ವರ್ಷದಂದೇ ಆರೋಗ್ಯದ ಸಮಸ್ಯೆಯಿಂದ ಅಲ್ಲಿನ ಮಿಲಿಟರಿ ಮೆಡಿಕಲ್‌ ಸೆಂಟರ್‌ನ ಇಂಟೆನ್ಸಿವ್‌ ಕೇರ್‌ ಯುನಿಟ್‌ಗೆ ಅಡ್ಮಿಟ್‌ ಆಗಿದ್ರು. ಆದ್ರೆ ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಆಗ್ಲಿ, ಉಪ ರಕ್ಷಣಾ ಕಾರ್ಯದರ್ಶಿ ಕ್ಯಾಥ್ಲೀನ್‌ ಹಿಕ್ಸ್‌ಗೆ ಆಗ್ಲಿ ಅಥ್ವಾ ಯಾರೊಬ್ಬ ಪ್ರಮುಖ ಅಧಿಕಾರಿಗೂ ತಿಳಿಸಿಲ್ಲ. ಮೂರುವರೆ ದಿನಗಳ ನಂತ್ರ ಅಮೆರಿಕದ ಪೆಂಟಗಾನ್‌ ಲಾಯ್ಡ್‌ ಆಸ್ಟಿನ್‌ ಆಸ್ಪತ್ರೆಗೆ ಅಡ್ಮಿಟ್‌ ಆಗಿರೋ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ ಲಾಯ್ಡ್‌ ಅವ್ರು ಡಿಸೆಂಬರ್‌ 22 ರಂದು ತಮ್ಮ ಆರೋಗ್ಯಕ್ಕೆ ಸಂಬಂಧಿಸಿ ಟ್ರೀಟ್‌ಮೆಂಟ್‌ ತಕೊಂಡಿದ್ರು. ಅದಾದ್ಮೇಲೆ ಅವ್ರಿಗೆ ತೀವ್ರ ನೋವು ಕಾಣಿಸ್ಕೊಂಡ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತಷ್ಟೇ ಮಾಹಿತಿ ನೀಡಿದ್ದಾರೆ. ಆದ್ರಿಂದ ಈ ಕುರಿತು ಹಲವಾರು ಪ್ರಶ್ನೆಗಳು ಎದ್ದಿವೆ. ಹಾಗಿದ್ರೆ ಲಾಯ್ಡ್‌ ಆಸ್ಟಿನ್‌ ಅವ್ರಿಗೆ ಏನಾಯ್ತು? ಅವ್ರು ಆಸ್ಪತ್ರೆಗೆ ದಾಖಲಾಗಿರೋ ವಿಚಾರ ವೈಟ್‌ ಹೌಸ್‌ನಿಂದ ಯಾಕೆ ಮುಚ್ಚಿಡಲಾಯ್ತು? ಅವ್ರ ಕರ್ತವ್ಯಗಳನ್ನ ಯಾರ್‌ ನಿಭಾಯಿಸ್ತಾರೆ? ಅನ್ನೋ ಪ್ರಶ್ನೆಗಳು ಅಮೆರಿಕದಲ್ಲಿ ಕೇಳಿಬರ್ತಿವೆ. ಇನ್ನು ಈ ಗೊಂದಲದ ಬಗ್ಗೆ ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ರಿಯಾಕ್ಟ್‌ ಮಾಡಿದ್ದಾರೆ. ʻಲಾಯ್ಡ್‌ ಆಸ್ಟಿನ್‌ ಅವ್ರು ICU ಗೆ ಅಡ್ಮಿಟ್‌ ಆಗಿರೋ ಬಗ್ಗೆ ಜನವರಿ 4ರ ತನಕ ಯಾವ್ದೇ ರೀತಿ ಮಾಹಿತಿ ನೀಡಿಲ್ಲ. ಇನ್ನು ಈ ಟೈಮ್‌ಲ್ಲಿ ಆಸ್ಟಿನ್‌ ಅವ್ರ ಕರ್ತವ್ಯ ನಿಭಾಯಿಸೋಕೆ ಕ್ಯಾಥ್ಲೀನ್‌ ಹಿಕ್ಸ್‌ಗೆ ಸೂಚಿಸಲಾಗಿತ್ತು. ಯಾಕಂದ್ರೆ ಸಾಮಾನ್ಯವಾಗಿ ಈ ಹಿಂದೆ ಲಾಯ್ಡ್‌ ಆಸ್ಟಿನ್‌ ವೆಕೇಶನ್‌ ಅಂತ ಹೋದಾಗೆಲ್ಲಾ ತಮ್ಮ ಅಧಿಕಾರವನ್ನ ಕ್ಯಾಥ್ಲೀನ್‌ ಹಿಕ್ಸ್‌ಗೆ ವಹಿಸ್ತಿದ್ರುʼ ಅಂತ ಅವ್ರು ಹೇಳಿದ್ದಾರೆ. ಈ ಕಾರಣದಿಂದ ಲಾಯ್ಡ್‌ ಆಸ್ಟಿನ್‌ಗೆ ಕ್ಷಮೆಯಾಚಿಸೋಕೆ ಸೂಚಿಸಲಾಗಿತ್ತು. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಆಸ್ಟಿನ್‌, ʻಇದ್ರ ಕಂಪ್ಲೀಟ್‌ ಜವಾಬ್ದಾರಿಯನ್ನ ನಾನು ವಹಿಸ್ತೀನಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply