ಎಲ್ಲಾ ವಿಷಕಾರಿ ಅನಿಲಗಳನ್ನ ನಾಶಪಡಿಸಿದ ಅಮೆರಿಕ!

masthmagaa.com:

ಅಮೆರಿಕ ತನ್ನ ಬಳಿ ಇದ್ದ ವಿಷಕಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನ ನಾಶಮಾಡಿರೋದಾಗಿ ಹೇಳಿದೆ. ಈ ಬಗ್ಗೆ ಮಾತಾಡಿರೋ ಅಮೆರಿಕ ಅಧ್ಯಕ್ಷ ಬೈಡನ್‌,ನಮ್ಮ ಬಳಿಯಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳ ಫೈನಲ್‌ ಸ್ಟಾಕ್‌ನ್ನ ಸೇಫ್‌ ಆಗಿ ಡೆಸ್ಟ್ರಾಯ್‌ ಮಾಡಿದಿವಿ ಅಂತ ಹೇಳೋಕೆ ನಾನು ಹೆಮ್ಮೆ ಪಡುತ್ತೇನೆ. ಈ ಮೂಲಕ ಭಯಾನಕ ಕೆಮಿಕಲ್‌ ಶಸ್ತ್ರಾಸ್ತ್ರ ಮುಕ್ತ ಜಗತ್ತನ್ನ ನಿರ್ಮಿಸೋದ್ರ ಕಡೆಗೆ ಒಂದೆಜ್ಜೆ ಹತ್ತಿರ ಇಟ್ಟಿದ್ದೇವೆ ಅಂತ ಹೇಳಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್‌ ಸಂಸ್ಥೆಯೊಂದು ಈ ಸಾಮೂಹಿಕ ಶಸ್ತ್ರಾಸ್ತ್ರ ನಾಶವನ್ನ ಪರೀಶೀಲನೆ ನಡೆಸಿದೆ ಅಂತ ತಿಳಿಸಿದ್ದಾರೆ. ಮಸ್ಟರ್ಡ್‌ ಗ್ಯಾಸ್‌, VX ( venomous agent X) ಸೇರಿದಂತೆ ಇತರ ವಿಷಾನಿಲಗಳನ್ನ ಹೊಂದಿರೋ ರಾಕೆಟ್‌ಗಳನ್ನ ಅಮೆರಿಕ ಹಲವು ವರ್ಷಗಳಿಂದ ಸ್ಟೋರ್‌ ಮಾಡ್ತಾ ಬಂದಿದೆ. ಈ ಹಿಂದೆ ಇವುಗಳನ್ನ ಒಂದನೇ ವಿಶ್ವಯುದ್ಧದ ಸಮಯದಲ್ಲಿ ಬಳಸಿತ್ತು. ಆದ್ರೆ ಇವುಗಳ ಬಳಕೆಗೆ ಜಾಗತಿಕವಾಗಿ ಖಂಡನೆ ಕೇಳಿ ಬಂದಿತ್ತು. ಹೀಗಾಗಿ ಜಾಗತಿಕ ರಾಷ್ಟ್ರಗಳು ತಮ್ಮ ಬಳಿ ಇರೋ ರಾಸಾಯನಿಕ ಶಸ್ತ್ರಾಸ್ತ್ರಗಳನ್ನ ನಾಶ ಮಾಡ್ಬೇಕು ಅಂತ 1993ರಲ್ಲಿ Chemical Weapons Convention ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಇದೀಗ ಸುಮಾರು 30 ವರ್ಷಗಳ ಬಳಿಕ ಅಮೆರಿಕ ಈ ಒಪ್ಪಂದ ಪೂರೈಸಿದೆ. ಅಂದ್ಹಾಗೆ ಈ ಒಪ್ಪಂದದ ಪ್ರಕಾರ ಹಲವು ದೇಶಗಳು ಈಗಾಗಲೇ ರಾಸಾಯನಿಕಗಳನ್ನ ನಾಶಪಡಿಸಿದ್ದೇವೆ ಅಂತ ಹೇಳಿದ್ರೂ, ಸೀಕ್ರೆಟ್‌ ಆಗಿ ಹೊಂದಿವೆ ಅಂತ ಹೇಳಲಾಗುತ್ತೆ. 2017ರಲ್ಲಿ ರಷ್ಯಾ ತನ್ನ ಎಲ್ಲಾ ಘೋಷಿತ ರಾಸಾಯನಿಕಗಳನ್ನ ಕಂಪ್ಲೀಟ್‌ ಆಗಿ ಡೆಸ್ಟ್ರಾಯ್‌ ಮಾಡಿತ್ತು.

-masthmagaa.com

Contact Us for Advertisement

Leave a Reply