ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ಅಮೆರಿಕ-ಇಸ್ರೇಲ್‌ ಸಂಬಂಧದಲ್ಲಿ ಬಿರುಕು!

masthmagaa.com:

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರವಾಗ್ತಿರೋ ಹೊತ್ತಲ್ಲೇ ಅಮೆರಿಕ ಹಾಗೂ ಇಸ್ರೇಲ್‌ ಸಂಬಂಧದಲ್ಲಿ ದೊಡ್ಡ ಬಿರುಕು ಉಂಟಾಗಿದೆ. ಪಾಲೇಸ್ತೇನ್‌ ಆಡಳಿತದ ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್‌ ಮಾನವ ಹಕ್ಕುಗಳನ್ನ ಉಲ್ಲಂಘನೆ ಮಾಡ್ತಿದೆ ಅಂತೇಳಿ ಇಸ್ರೇಲ್‌ನ ಸೇನಾ ಯೂನಿಟ್‌ ಮೇಲೆ ಸ್ಯಾಂಕ್ಷನ್‌ ಹೇರೋಕೆ ಅಮೆರಿಕ ತಯಾರಿ ನಡೆಸ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅಮೆರಿಕ ತನ್ನ ಮಿತ್ರದೇಶವೊಂದರ ಅದೂ ಇಸ್ರೇಲ್‌ನಂತಹ ಆಪ್ತ ದೇಶದ ಸೇನಾ ಯೂನಿಟ್‌ ಮೇಲೆ ನಿರ್ಭಂಧ ಹೇರೋಕೆ ಮುಂದಾಗಿದೆ. ಈ ಬಗ್ಗೆ ಖುದ್ದು ಅಮೆರಿಕ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್‌ ಮಾತಾಡಿದ್ದಾರೆ. ʻʻನಿರ್ಬಂಧ ಹೇರೋ ಬಗ್ಗೆ ಶೀಘ್ರದಲ್ಲೇ ನಾವು ನಿರ್ಧಾರ ಪ್ರಕಟ ಮಾಡ್ತೀವಿ. ಇಸ್ರೇಲ್‌ನ ಸೇನಾ ಯೂನಿಟ್‌ ಬಗ್ಗೆ ನಾವು 2022ರಿಂದಲೂ ತನಿಖೆ ಮಾಡ್ತಿದ್ದೀವಿ ಅಂತ ಬ್ಲಿಂಕನ್‌ ತಿಳಿಸಿದಾದರೆ. ಅಂದ್ಹಾಗೆ ಅಮೆರಿಕ ಈಗ ನಿರ್ಬಂಧ ಹೇರೋಕೆ ಹೊರಟಿರೋ ಸೇನಾ ಯೂನಿಟ್‌ನ ಹೆಸರು ʻನೆತ್‌ಜಾಹ್‌ ಯಹೂದಾʼ ಅಂತ. ಇದು ಇಸ್ರೇಲ್‌ನ ಡಿಫೆನ್ಸ್‌ ಫೋರ್ಸ್‌ನ ಒಂದು ವಿಶೇಷ ಪಡೆ. ಇದು 2005ರಲ್ಲಿ ಸ್ಥಾಫನೆಯಾದ ʻಫಿರ್‌ ಬ್ರಿಗೇಡ್‌ʼ (Kfir Brigade) ಅನ್ನೋ ಆಪರೇಶನಲ್‌ ಯೂನಿಟ್‌ನ ಭಾಗ. ಇದರ ಕಾರ್ಯಾಚರಣೆಗಳು ತುಂಬಾ ಭೀಕರವಾಗಿರುತ್ತೆ ಅಂತ ಜಾಗತಿಕ ರಕ್ಷಣಾ ಸಂಸ್ಥೆಗಳು ಹೇಳ್ತವೆ. ಸೋ ಇದು ಖಟ್ಟರ್‌ ಧಾರ್ಮಿಕ ವಿಚಾರಗಳಿಂದ ಪ್ರಭಾವಿತವಾಗಿರೋ ಗುಂಪಾಗಿದ್ದು ಇವರನ್ನ ವೆಸ್ಟ್‌ಬ್ಯಾಂಕ್‌ನಲ್ಲಿ ನಿಯೋಜನೆ ಮಾಡಲಾಗಿದೆ. ಸೋ ಅವರು ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡ್ತಿದ್ದಾರೆ ಅನ್ನೋದು ಅಮೆರಿಕದಿಂದ ಬಂದ ಆರೋಪವಾಗಿತ್ತು. ಇದಕ್ಕೆ ಕಾರಣ 2022ರಲ್ಲಿ ನಡೆದಿದ್ದ ಅದೊಂದು ಘಟನೆ. 2022ರಲ್ಲಿ ಪಾಲೇಸ್ತೇನ್‌ ಅಮೆರಿಕನ್‌ ಆಗಿದ್ದ 80 ವರ್ಷದ ವೃದ್ದರೊಬ್ಬರನ್ನ ಹತ್ಯೆ ಮಾಡಲಾಗಿತ್ತು. ಅದು ಹೃದಯಾಘಾತದಿಂದ ಆದ ಸಾವು ಅಂತ ಇಸ್ರೇಲ್‌ ಹೇಳಿತ್ತು. ಆದ್ರೆ ಆ ಹತ್ಯೆಯ ಹಿಂದೆ ಇದೇ ಯಹೂದಾ ಅನ್ನೋ ಸೇನಾ ಯೂನಿಟ್‌ ಇದೆ ಅಂತ ಆರೋಪ ಕೇಳಿಬಂದಿತ್ತು. ಅಲ್ಲಿಂದ ಅಮೆರಿಕ ತನಿಖೆ ನಡೆಸ್ತಿತ್ತು. ಈಗ ಆ ತನಿಖೆ ಪೂರ್ಣಗೊಂಡಿದ್ದು ಅಮೆರಿಕದಲ್ಲಿರೋ ಬೈಡೆನ್‌ ಆಡಳಿತ ಇದರ ಹಿಂದೆ ಇಸ್ರೇಲ್‌ನ ಸೇನಾ ಯೂನಿಟ್‌ ಅಂತ ಗೊತ್ತಾಗಿದೆಯಂತೆ. ಹೀಗಾಗಿ ಈ ಯೂನಿಟ್‌ ಮೇಲೆ ನಿರ್ಬಂಧ ಹೇರೋಕೆ ಅಮೆರಿಕ ಮುಂದಾಗಿದೆ. ಇನ್ನು ಅಮೆರಿಕದಿಂದ ಈ ರೀತಿ ಸುದ್ದಿ ಹೊರಬರ್ತಿದ್ದಂತೆ ಇಸ್ರೇಲ್‌ ಕೂಡ ಅಮೆರಿಕ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಇಸ್ರೇಲ್‌ ಸಚಿವ ಬೆಮ್‌ ಗ್ವಿರ್‌ ʻʻ ಅಮೆರಿಕ ರೆಡ್‌ಲೈನ್‌ ದಾಟುತ್ತಿದೆ ಅಂತ ಖಾರವಾಗಿ ಉತ್ತರಿಸಿದ್ದಾರೆ. ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕೂಡ ಈ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ʻʻ ಇಸ್ರೇಲ್ ರಕ್ಷಣಾ ಪಡೆಗಳ ಮೇಲೆ ಯಾವುದೇ ಕಾರಣಕ್ಕೂ ನಿರ್ಬಂಧ ಹೇರೋಕೆ ಬಿಡಲ್ಲ. ನಮ್ಮ ಸೈನಿಕರು ಭಯೋತ್ಪಾದಕ ರಾಕ್ಷಸರ ವಿರುದ್ಧ ಹೋರಾಡುತ್ತಿದ್ದಾರೆ, ಮತ್ತು ಐಡಿಎಫ್ ಘಟಕದ ಮೇಲೆ ನಿರ್ಬಂಧಗಳನ್ನು ಹೇರುವ ಈ ಉದ್ದೇಶ ಅಮೆರಿಕಗೆ ಸಂಬಂಧಪಟ್ಟಿದ್ದಲ್ಲ. ಇದನ್ನ ಅಸಂಬದ್ಧತೆಯ ಉತ್ತುಂಗ. ನೈತಿಕವಾಗಿ ಕೆಳಹಂತಕ್ಕೆ ತಲುಪಬೇಡಿ ಅಂತ ಇಸ್ರೇಲ್‌ ಪ್ರಧಾನಿ ಅಮೆರಿಕಗೆ ತಿರುಗೇಟು ಕೊಟ್ಟಿದ್ದಾರೆ. ಸ್ನೇಹಿತರೇ ಒಂದು ವೇಳೆ ಈ ನಿರ್ಬಂಧ ಹೇರಿದ್ರೆ ಅಮೆರಿಕದಿಂದ ಈ ಮಿಲಿಟರಿ ವಿಂಗ್‌ಗೆ ಸಹಾಯ ಸಿಗಲ್ಲ. ಜೊತೆಗೆ ಅಮೆರಿಕದ ಸೇನಾ ಸಮರಾಭ್ಯಾಸದಲ್ಲೂ ಅವರಿಗೆ ಅವಕಾಶ ಸಿಗಲ್ಲ. ಜೊತೆಗೆ ಜಾಗತಿಕವಾಗಿ ಕೂಡ ಒಂದಷ್ಟು ಮಟ್ಟಿಗೆ ಇಸ್ರೇಲ್‌ ಸೇನೆ ವಿರೋಧ ಫೇಸ್‌ ಮಾಡ್ಬೇಕಾಗಿ ಬರುತ್ತೆ. ಈಗಾಗಲೇ ಗಾಜಾ ಯುದ್ದಕ್ಕೆ ಸಂಬಂಧಪಟ್ಟಂತೆ ಇಸ್ರೇಲ್‌ ಮೇಲೆ ಒಂದಷ್ಟು ಆರೋಪಗಳು ಇವೆ. ಹೀಗಾಗಿ ಇಸ್ರೇಲ್‌ ಇದನ್ನ ವಿರೋಧ ಮಾಡ್ತಿದೆ. ಅಮೆರಿಕನೇ ಈ ನಿರ್ಬಂಧ ಹೇರಿದ ಮೇಲೆ ಯುರೋಪ್‌ ಕೂಡ ಅದೇ ದಾರಿಯನ್ನ ಹಿಡಿಯುತ್ತೆ. ಸೋ ಸಂಕಷ್ಟದ ಸಮಯದಲ್ಲಿ ಜಾಗತಿಕ ಬೆಂಬಲ ಇಲ್ಲದಂತಾಗುತ್ತೆ ಅಂತ ಇಸ್ರೇಲ್‌ ಈ ರೀತಿ ಅಮೆರಿಕನ ಹಿಂದೆ ಸರಿಯುವಂತೆ ಎಚ್ಚರಿಕೆ ಕೊಡ್ತಿದೆ ಅಂತ ಹೇಳಲಾಗ್ತಿದೆ. ಜೊತೆಗೆ ಈಗ ಅಮೆರಿಕ ಮತ್ತು ಇಸ್ರೇಲ್‌ನಲ್ಲಿರೋ ನಾಯಕರು ಪರಸ್ಪರ ಸೈದ್ದಾಂತಿಕ ವಿರೋಧಿಗಳು. ಬೈಡೆನ್‌ ಹಾಗೂ ನೆತನ್ಯಾಹು ಅನೇಕ ಸಲ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಾಕ್ಸಮರ ಮಾಡ್ಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಇಸ್ರೇಲ್‌ನ ಈ ನಡೆ ಸಾಕಷ್ಟು ಮಹತ್ವ ಪಡ್ಕೋತಿದೆ.

-masthmagaa.com

Contact Us for Advertisement

Leave a Reply