ಅಮೆರಿಕದ ಪಿಕಾನ್‌ ಮೇಲೆ ಸುಂಕ ಕಟ್‌ ಮಾಡಿದ ಭಾರತ! ಸಂಸತಗೊಂಡ ಅಮೆರಿಕ!

masthmagaa.com:

ಅಮೆರಿಕದಿಂದ ಎಕ್ಸ್‌ಪೋರ್ಟ್‌ ಆಗೋ ಪಿಕಾನ್‌ ಅಂದ್ರೆ ಇದು ಒಂತರಾ ವಾಲ್‌ನಟ್‌ ತರ ಇರೋ ಡ್ರೈಫ್ರೂಟ್‌ ಇದ್ರ ಮೇಲಿನ ಟ್ಯಾರಿಫ್‌ ಅನ್ನ 70% ಕಡಿಮೆ ಮಾಡೋಕೆ ಭಾರತ ನಿರ್ಧರಿಸಿದೆ. ಭಾರತದ ಈ ನಿರ್ಧಾರವನ್ನ ಸ್ವಾಗತಿಸಿರೋ ಅಮೆರಿಕದ ಜಾರ್ಜಿಯಾ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಈ ನಡೆಯಿಂದ ಸಾವಿರಾರು ರೈತರಿಗೆ ಸಹಾಯವಾಗುತ್ತೆ ಹಾಗೂ ಪಿಕಾನ್‌ ಇಂಡಸ್ಟ್ರೀಗೆ ಇದು ಅತ್ಯಂತ ಮಹತ್ವವಾದ ವಿಷಯವಾಗಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಅಮೆರಿಕದ ಬಹುಪಾಲು ಪಿಕಾನ್‌ ಅನ್ನ ಜಾರ್ಜಿಯಾದಲ್ಲೇ ಬೆಳೆಯಲಾಗುತ್ತೆ. ಭಾರತದ ಈ ಅನೌನ್ಸ್‌ಮೆಂಟ್‌ ತುಂಬಾ ಸಂತಸದ ವಿಚಾರ ಹಾಗೂ ಇದ್ರಿಂದ ಜಾರ್ಜಿಯಾ ಜಾಗತಿಕವಾಗಿ ತನ್ನ ಮಾರ್ಕೆಟ್‌ ವಿಸ್ತರಣೆ ಮಾಡೋಕೆ ಸಹಾಯವಾಗುತ್ತೆ ಅಂತ ಸೆನೇಟರ್‌ ಒಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply