ನಾಲಿಗೆಯನ್ನ ಚೆಂಡಿನಂತೆ ತಿರುಗಿಸಿದ ಯುವಕ…! ಗಿನ್ನಿಸ್‌ ದಾಖಲೆ

masthmagaa.com:

ನಾಲಿಗೆಯಿಂದ ಮೂಗನ್ನ ಟಚ್‌ ಮಾಡಿ ಅನ್ನೋದು ಸದ್ಯ ನಮಗೆ ನಿಮೆಗಲ್ಲಾ ಗೊತ್ತಿರೋ ಆಟ. ಆದ್ರೆ ಇಲ್ಲೊಬ್ಬ ಭೂಪ ನಾಲಿಗೆಯನ್ನ ಚೆಂಡಿನಂತೆ ಮಾಡಿ ಜಗತ್ತಿನ ಹುಬ್ಬೇರಿಸಿದ್ದಲ್ಲದೇ ವಲ್ಡ್‌ ಆಫ್‌ ರೆಕಾರ್ಡ್‌ಗೂ ಕೂಡ ತನ್ನ ಹೆಸರು ಬರೆಸಿಕೊಂಡಿದ್ದಾನೆ. ಡಾಂಟೆ ಬರ್ನ್ಸ್‌ ಅನ್ನೋ ಅಮೆರಿಕಾ ಮೂಲದ ಯುವಕ ಸುಮಾರು 42 ಮಿಲಿಮೀಟರ್‌ ಅಂದ್ರೆ ಸುಮಾರು1.65 ಇಂಚು ಎತ್ತರ, ಹಾಗು 40 ಮಿಲಿ ಮೀಟರ್‌ ಅಂದ್ರೆ 1.57 ಇಂಚು ಅಗಲಗಳ ವರೆಗೆ ಎಳೆದು ಗಿನ್ನಿಸ್‌ ಬುಕ್ ರೆಕಾರ್ಡ್‌ಗೆ ಸೇರಿಸಿದ್ದಾನೆ. ತನ್ನ ನಾಲಿಗೆಯನ್ನ‌ ಹೆಚ್ಚು ಕಡಿಮೆ ಪಿಂಗ್‌ ಪಾಂಗ್ ಬಾಲ್‌ ಆಕಾರಕ್ಕೆ ತಿರುಗಿಸಿ‌ದ್ದಾನೆ. ಇನ್ನು ಈ ಬಗ್ಗೆ ಮಾತಾಡಿರೋ ಡಾಂಟೆ ಇದು ದೇವರು ನನಗೆ ಕೊಟ್ಟಿರೋ ವಿಶೇಷ ಉಡುಗೊರೆ ಅಂತ ಸಂತಸ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply