ಸಾರ್ವಜನಿಕ ಕಟ್ಟಡಗಳ ಮೇಲಿನ ಧ್ವಜವನ್ನ ಅರ್ಧಕ್ಕೆ ಇಳಿಸಿದ ಅಮೆರಿಕ! ಕಾರಣವೇನು?

masthmagaa.com:

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಗುಂಡಿನ ದಾಳಿ ಮಾಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಚೀನಾದ ನ್ಯೂ ಇಯರ್‌ ಆಚರಿಸೋಕೆ ಅಂತ ಪಾರ್ಕ್‌ ಒಂದ್ರಲ್ಲಿ ಸೇರಿದ್ದ ಸಾವಿರಾರು ಜನರ ಮೇಲೆ 72 ವರ್ಷದ ವ್ಯಕ್ತಿ ಏಕಾಏಕಿ ಗುಂಡು ಹಾರಿಸಿದ್ದ. ಆರೋಪಿಯನ್ನ ಟ್ರ್ಯಾಕ್‌ ಮಾಡಿ ಆತನ ವಾಹನವನ್ನ ಪೊಲೀಸರು ಸುತ್ತುವರೆದ ನಂತ್ರ ವಾಹನದಲ್ಲಿ ಗುಂಡಿನ ಶಬ್ದ ಕೇಳಿ ಬಂತು. ಆತ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ. ಇತ್ತ ಸಾಮೂಹಿಕ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸೋದಕ್ಕಾಗಿ, ಎಲ್ಲಾ ಸಾರ್ವಜನಿಕ ಕಟ್ಟಡಗಳ ಮೇಲಿರೋ ಅಮೆರಿಕ ಬಾವುಟವನ್ನ ಅರ್ಧಕ್ಕೆ ಹಾರಿಸಿ ಅಂತ ಅಧ್ಯಕ್ಷ ಜೋ ಬೈಡೆನ್‌ ಆದೇಶಿಸಿದ್ದಾರೆ ಅಂತ ವೈಟ್‌ಹೌಸ್‌ ಹೇಳಿದೆ.

-masthmagaa.com

Contact Us for Advertisement

Leave a Reply