ಅಮೆರಿಕ: ಡೊನಾಲ್ಡ್‌ ಟ್ರಂಪ್‌ ವಿರುದ್ಧ ನಿಕ್ಕಿ ಹ್ಯಾಲೆಗೆ ಮೊದಲ ಜಯ!

masthmagaa.com:

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಮತ್ತು ಡೆಮಾಕ್ರೆಟಿಕ್‌ ಪಾರ್ಟಿಗಳಲ್ಲಿ ಸೂಕ್ತ ಕ್ಯಾಂಡಿಡೇಟ್‌ಗಾಗಿ ರೇಸ್‌ ನಡೀತಿದೆ. ರಿಪಬ್ಲಿಕನ್‌ ಪಾರ್ಟಿಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಬ್ಯಾಕ್‌ ಟು ಬ್ಯಾಕ್‌ ಸೋಲು ಕಾಣ್ತಿದ್ದ ಅಭ್ಯರ್ಥಿ ನಿಕ್ಕಿ ಹ್ಯಾಲೆಗೆ ಈಗ ಜಯವಾಗಿದೆ. ರಾಜಧಾನಿ ವಾಷಿಂಗ್‌ಟನ್‌ ಡಿಸಿನಲ್ಲಿ ನಡೆದ ಪ್ರೈಮರೀಸ್‌ ವೋಟಿಂಗ್‌ನಲ್ಲಿ ಟ್ರಂಪ್‌ರನ್ನ ಹಿಂದಿಕ್ಕಿ ನಿಕ್ಕಿ ಹ್ಯಾಲೆ ಹೆಚ್ಚು ವೋಟ್‌ ಪಡೆದಿದ್ದಾರೆ. ಈ ಮೂಲಕ ಇದುವರೆಗೆ ನಡೆದ ಎಲೆಕ್ಷನ್‌ನಲ್ಲಿ ನಿಕ್ಕಿ ಹ್ಯಾಲೆಗೆ ಮೊದಲ ಬಾರಿ ಟ್ರಂಪ್‌ ವಿರುದ್ಧ ದೊಡ್ಡ ಗೆಲುವು ಸಿಕ್ಕಿದೆ. ಇನ್ನು ನಿಕ್ಕಿ ಹ್ಯಾಲೆಗೆ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿಯಾಗಿ ಅಧ್ಯಕ್ಷೀಯ ಚುನಾವಣೆಯ ಕಣಕ್ಕಿಳಿಯಲು ಕೇವಲ ಒಂದೇ ಒಂದು ಲಾಸ್ಟ್‌ ಚಾನ್ಸ್‌ ಇದೆ. ಅದೇ ʻಸೂಪರ್‌ ಟ್ಯುಸ್‌ಡೇʼ ವೋಟಿಂಗ್‌. ಅಮೆರಿಕದ ಒಟ್ಟು 15 ರಾಜ್ಯಗಳು ಮತ್ತೊಂದು ಟೆರಿಟರಿಯಲ್ಲಿ ಒಂದೇ ದಿನ ನಡೆಲಿರೋ ಪ್ರೈಮರೀಸ್‌ಗೆ ಸೂಪರ್‌ ಟ್ಯುಸ್‌ಡೇ ಎನ್ನಲಾಗುತ್ತೆ. ಇದ್ರಲ್ಲಿ ನಿಕ್ಕಿ ಹ್ಯಾಲೆ ಟ್ರಂಪ್‌ ಅವ್ರನ್ನ ಬೀಟ್‌ ಮಾಡಿದ್ರೆ…ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ಮುಂದಕ್ಕೆ ಹೋಗ್ಬೋದು. ಬೈಡನ್‌ ವಿರುದ್ಧ ಪೈಪೋಟಿಗೆ ನಿಂತ್ಕೊಬೋದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply