ಇಸ್ರೇಲ್‌ ಗಾಜಾ ಪಟ್ಟಿಯನ್ನ ಪುನಃ ಆಕ್ರಮಿಸಬಾರದು: ಅಮೆರಿಕ

masthmagaa.com:

ಇಸ್ರೇಲ್‌ ಗಾಜಾ ಯುದ್ದ ಕಂಟಿನ್ಯೂ ಆಗಿದ್ದು ಈಗ ಅಮೆರಿಕ ಇಸ್ರೇಲ್‌ ವಿರುದ್ದವೇ ತಿರುಗಿ ಬಿದ್ದಿದೆ.ʻʻಇಸ್ರೇಲ್‌ ಯಾವುದೇ ಕಾರಣಕ್ಕೂ ಗಾಜಾ ಪಟ್ಟಿಯನ್ನ ಆಕ್ರಮಿಸೋ ಹಾಗಿಲ್ಲ ಅಂತ ಹೇಳಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಈ ಹೇಳಿಕೆ ಕೊಟ್ಟಿದ್ದಾರೆ. ʻಗಾಜಾ… ಭಯೋತ್ಪಾದನೆಗೆ ಪ್ಲಾಟ್‌ಫಾರ್ಮ್‌ ಆಗಲು ಸಾಧ್ಯವಿಲ್ಲ. ಹಾಗೇಯೇ ಇಸ್ರೇಲಿಗರು ಕೂಡ ಗಾಜಾವನ್ನ ಆಕ್ರಮಿಸಬಾರ್ದು. ಗಾಜಾ ಪ್ರದೇಶದ ಸೈಜ್‌ ಯಾವ್ದೇ ಕಾರಣಕ್ಕೂ ಕಡಿಮೆಯಾಗ್ಬಾರ್ದುʼ ಅಂತ ಹೇಳಿದ್ದಾರೆ. ಇದೇ ವೇಳೆ ʻಇಸ್ರೇಲ್‌ ತನ್ನ ಸೆಲ್ಫ್‌ ಡಿಫೆನ್ಸ್‌ ಅಥ್ವಾ ಆತ್ಮ ರಕ್ಷಣೆಗಾಗಿ ನಡೆಸ್ತಿರೋ ಹಕ್ಕಿನ ಹೋರಾಟಕ್ಕೆ ಮಾತ್ರ ಅಮೆರಿಕದ ಬೆಂಬಲ ಇದೆʼ ಅಂತ ಬ್ಲಿಂಕನ್‌ ಬ್ಯಾಲೆನ್ಸಿಂಗ್‌ ಹೇಳಿಕೆ ಕೊಟ್ಟಿದ್ದಾರೆ… ಅಂದ್ಹಾಗೆ ಗಾಜಾ ಯುದ್ಧ ಮುಗಿದ ನಂತ್ರ ಗಾಜಾವನ್ನ ತನ್ನ ದೇಶಕ್ಕೆ ಸೇರಿಸಿಕೊಳ್ಳೋಕೆ ಇಸ್ರೇಲ್‌ ಪ್ಲಾನ್‌ ಹಾಕಿದೆ ಅನ್ನೋ ಸುದ್ದಿ ಬಂದಿತ್ತು. ಇಸ್ರೇಲ್‌ ಕೂಡ ಗಾಜಾದ ಮುಂದಿನ ದಿನಗಳು ಚೆನ್ನಾಗಿರಲಿವೆ ಅಂತೇಳಿತ್ತು. ಈ ಮೂಲಕ ಗಾಜಾ ವಶಪಡಿಸಿಕೊಳ್ಳೊ ಹಿಂಟ್‌ ಇಟ್ಟಿತ್ತು. ಇದರ ನಡುವೆಯೇ ಅಮೆರಿಕ ಈ ರೀತಿ ಹೇಳಿಕೆ ಕೊಟ್ಟಿದೆ. ಇಸ್ರೇಲ್‌ ಯುದ್ದ ಮಾಡಲಿ, ಆದ್ರೆ ಗಾಜಾವನ್ನ ಮಾತ್ರ ವಶ ಮಾಡ್ಕೊಬಾರದು ಅಂತ ಹೇಳಿದೆ. ಇನ್ನೊಂದ್ಕಡೆ ವೆಸ್ಟ್‌ ಬ್ಯಾಂಕ್‌ನಲ್ಲಿ ಇಸ್ರೇಲ್‌ ತನ್ನ ಸೆಟಲ್‌ಗಳನ್ನ ಹೆಚ್ಚಿಸೋದಾಗಿ ಅಧಿಕೃತವಾಗಿಯೇ ಘೋಷಿಸಿದೆ. ವೆಸ್ಟ್‌ ಬ್ಯಾಂಕ್‌ನಲ್ಲಿ ಹೊಸದಾಗಿ ಸುಮಾರು 3,300ಕ್ಕೂ ಅಧಿಕ ಮನೆಗಳನ್ನ ನಿರ್ಮಿಸೋದಾಗಿ ಇಸ್ರೇಲ್‌ ಹೇಳಿದೆ. ಅಲ್ದೇ ಇಸ್ರೇಲಿಗರಿಗೆ ಯಾವ್ದೇ ರೀತಿ ಹಾನಿ ಮಾಡೋಕೆ ಮುಂದಾದ್ರೆ…. ಅಂತಹ ಜಾಗದಲ್ಲೇ ನಮ್ಮ ಸೆಟಲ್‌ಮೆಂಟ್‌ ಜಾಸ್ತಿ ಮಾಡ್ತೀವಿ. ಆ ದೇಶದ ಕಂಟ್ರೋಲ್‌ ತಗೊಳೋದು ಹೆಚ್ಚು ಮಾಡ್ತೀವಿ ಅಂತ ವಾರ್ನಿಂಗ್‌ ನೀಡಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದಷ್ಟೇ ಪ್ಯಾಲೆಸ್ತೀನ್‌ ಬಂದೂಕುಧಾರಿಗಳು ವೆಸ್ಟ್‌ ಬ್ಯಾಂಕ್‌ನಲ್ಲಿರೋ ಇಸ್ರೇಲಿ ಜಾಗಗಳ ಮೇಲೆ ದಾಳಿ ನಡೆಸಿದ್ರು. ಈ ದಾಳಿಗೆ ಓರ್ವ ಇಸ್ರೇಲಿ ಪ್ರಜೆ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ರು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಈಗ ಈ ಹೊಸ ಪ್ಲಾನ್‌ ಹಾಕೊಂಡಿದೆ.

-masthmagaa.com

Contact Us for Advertisement

Leave a Reply