ವಿಶ್ವ ಬ್ಯಾಂಕ್‌ಗೆ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಸಾರಥ್ಯ! ಅಜಯ್‌ ಬಾಂಗಾರನ್ನ ನಾಮಿನೇಟ್‌ ಮಾಡಿದ ಅಮೆರಿಕ!

masthmagaa.com:

ವಿಶ್ವ ಬ್ಯಾಂಕ್‌ ಮುಖ್ಯಸ್ಥ ಸ್ಥಾನಕ್ಕೆ ಭಾರತ ಮೂಲದ ಉದ್ಯಮಿ ಅಜಯ್‌ ಬಾಂಗಾ ಅವ್ರನ್ನ ಅಮೆರಿಕ ನಾಮನಿರ್ದೇಶನ ಮಾಡಿದೆ. ಅಜಯ್‌ ಬಾಂಗಾ ಅವ್ರನ್ನ ಅಮೆರಿಕ ವಿಶ್ವ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡ್ತಿದೆ. ಇತಿಹಾಸದ ಈ ನಿರ್ಣಾಯಕ ಸಮಯದಲ್ಲಿ ಜಾಗತಿಕ ಸಂಸ್ಥೆಯಾದ ವರ್ಲ್ಡ್‌ ಬ್ಯಾಂಕ್‌ ಅನ್ನ ಮುನ್ನಡೆಸೋಕೆ ಅಜಯ್‌ ಬಾಂಗಾ ಸಜ್ಜಾಗಿದಾರೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಇನ್ನು ಇವ್ರ ನೇಮಕವನ್ನ ವಿಶ್ವ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರು ಒಪ್ಪಿದರೆ, ಅಜಯ್‌ ಅವ್ರು ವಿಶ್ವ ಬ್ಯಾಂಕ್‌ನ ಮುಖ್ಯಸ್ಥರಾಗೊ ಮೊದಲ ಭಾರತೀಯ ಮೂಲದ ವ್ಯಕ್ತಿ ಹಾಗೂ ಮೊದಲ ಅಮೆರಿಕನ್‌ ಸಿಖ್‌ ವ್ಯಕ್ತಿಯಾಗಲಿದ್ದಾರೆ. ಅಂದ್ಹಾಗೆ ಪ್ರಸ್ತುತ ವಿಶ್ವ ಬ್ಯಾಂಕ್‌ನ ಮುಖ್ಯಸ್ಥ ಡೇವಿಡ್‌ ಮಲ್ಪಾಸ್‌ ಅವ್ರು ತಮ್ಮ ಸ್ಥಾನದಿಂದ ಕೆಳಗಿಳಿಯೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply