ಅಮೆರಿಕ ಅಧ್ಯಕ್ಷನಿಂದ ಮೋದಿಗೆ ಆಹ್ವಾನ! ಏನಿದರ ಮಹತ್ವ?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಧಾನಿ ಮೋದಿಗೆ ಶ್ವೇತಭವನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಅಂತ ವರದಿಯಾಗಿದೆ. ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ಮೋದಿ ಹಲವಾರು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಆದ್ರೆ ಅವೆಲ್ಲಾ ಆಫೀಶಿಯಲ್‌ ಅಥ್ವಾ ಕೆಲಸದ ನಿಮಿತ್ತ ಹೋಗಿದ್ರು. ಆದ್ರೆ ಈ ಭೇಟಿ ಉಭಯ ನಾಯಕರ ವೈಯಕ್ತಿಕ ಭೇಟಿಯಾಗಿದ್ದು, ಎರಡು ದೇಶಗಳ ಉತ್ತಮ ಬಾಂದವ್ಯದ ಸಂಕೇತವಾಗಿದೆ ಎನ್ನಲಾಗಿದೆ. ಜೂನ್‌ ಅಥ್ವಾ ಜುಲೈನಲ್ಲಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈ ಭೇಟಿ ಸೆಪ್ಟಂಬರ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯ ಮುನ್ನ ನಡೆಯಲಿದ್ದು, ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳಿಗೆ ಮಹತ್ವ ನೀಡಲಾಗುತ್ತೆ ಅಂತ ಮೂಲಗಳು ತಿಳಿಸಿವೆ. ಇನ್ನು ಕೊನೆಯ ಬಾರಿ ಭಾರತದ ಪ್ರಧಾನಿಯೊಬ್ರು ಈ ರೀತಿ ಅಮೆರಿಕದ ಆತಿಥ್ಯ ಸ್ವೀಕರಿಸಿದ್ದು 2009ರಲ್ಲಿ. ಆ ಟೈಮಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಆಗಿನ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವ್ರನ್ನ ಇನ್ವೈಟ್‌ ಮಾಡಿದ್ರು. ಇತ್ತ ಬೈಡೆನ್‌ ಅಧ್ಯಕ್ಷರಾದ ಬಳಿಕ 2022ರ ಡಿಸೆಂಬರ್‌ನಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಶ್ವೇತ ಭವನಕ್ಕೆ ಭೇಟಿ ನೀಡಿದ್ರು. ಅವರನ್ನ ಬಿಟ್ರೆ ಇದೀಗ ಮೋದಿಯನ್ನ ಇನ್ವೈಟ್‌ ಮಾಡಿದ್ದು, ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply