ʻಅರುಣಾಚಲ ಭಾರತಕ್ಕೆ ಸೇರಿದ್ದುʼ: ಚೀನಾಗೆ ಅಮೆರಿಕ ತರಾಟೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಭಾರತದ ಪರ ಸ್ಟೇಟ್‌ಮೆಂಟ್ ಕೊಟ್ಟಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಅಂತೇಳೊ ಮೂಲಕ ಚೀನಾದ ಉದ್ದಟತವನ್ನ ತೀವ್ರವಾಗಿ ಖಂಡಿಸಿದೆ. ʻಅಮೆರಿಕ, ಅರುಣಾಚಲ ಪ್ರದೇಶವನ್ನ ಭಾರತದ ಭೂಪ್ರದೇಶ ಅಂತ ಗುರುತಿಸುತ್ತೆ. ಲೈನ್‌ ಆಫ್‌ ಆಕ್ಚುಚಲ್‌ ಕಂಟ್ರೋಲ್‌ ಅಥವಾ LAC ಗಡಿಯಲ್ಲಿ ಅತಿಕ್ರಮಣ ಮಾಡಿದ್ರೆ, ಸೇನೆ ಅಥ್ವಾ ನಾಗರಿಕರ ಮೂಲಕ ಈ ಸ್ಟೇಟಸ್‌ನ್ನ ಚೇಂಜ್‌ ಮಾಡೋಕೆ ಬಯಸಿದ್ರೆ ಅದನ್ನ ನಾವು ವಿರೋಧಿಸ್ತೀವಿʼ ಅಂತೇಳಿದೆ ಅಂದ್ಹಾಗೆ ಮಾರ್ಚ್‌ 09ರಂದು ಪ್ರಧಾನಿ ಮೋದಿಯವ್ರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ರು. ಚೀನಾ ಈ ಭೇಟಿಯನ್ನ ಖಂಡಿಸಿತ್ತು. ಅರುಣಾಚಲ ಪ್ರದೇಶ ನಮಗೆ ಸೇರಿದ್ದು ಅಂತೆಲ್ಲಾ ಮೊಂಡುತನ ಪ್ರದರ್ಶಿಸಿತ್ತು. ಆದ್ರೆ ಭಾರತ ಇದಕ್ಕೆ ತಿರುಗೇಟುಕೊಟ್ಟಿತ್ತು. ಈಗ ಅಮೆರಿಕ ಕೂಡ ಚೀನಾವನ್ನ ತರಾಟೆಗೆ ತಗೊಂಡಿದೆ.

-masthmagaa.com

Contact Us for Advertisement

Leave a Reply