ಚೀನಾ ಮತ್ತು ಬೆಲಾರುಸ್‌ ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿಕೆ!

masthmagaa.com:

ಪಾಕಿಸ್ತಾನದ ಮಿಸೈಲ್ ಪ್ರೋಗ್ರಾಮ್‌ಗಳಿಗೆ ಚೀನಾ ಮತ್ತು ಬೆಲಾರುಸ್‌ನ ಸಂಸ್ಥೆಗಳು ಸಹಾಯ ಮಾಡ್ತಿವೆ ಅಂತೇಳಿ ಅಮೆರಿಕ ಅವುಗಳ ಮೇಲೆ ನಿರ್ಬಂಧ ಹೇರಿದೆ. ಚೀನಾದ ಮೂರು ಸಂಸ್ಥೆಗಳು ಮತ್ತು ಬೆಲಾರುಸ್‌ನ ಸಂಸ್ಥೆಯೊಂದ್ರ ವಿರುದ್ಧ ನಿರ್ಬಂಧ ಹೇರಲಾಗಿದೆ ಅಂತ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಈ ಸಂಸ್ಥೆಗಳು ಪಾಕಿಸ್ತಾನದ ಬ್ಯಾಲಸ್ಟಿಕ್‌ ಮಿಸೈಲ್‌ ಪ್ರೋಗ್ರಾಮ್‌ನಲ್ಲಿ ಕ್ಷಿಪಣಿಗಳಿಗೆ ಬೇಕಾಗಿರೋ ವಸ್ತುಗಳನ್ನ ಸಪ್ಲೈ ಮಾಡ್ತಿದ್ವು. ಈ ಮೂಲಕ MTCR ಕೆಟಗರಿ 1 ಬ್ಯಾಲಸ್ಟಿಕ್‌ ಮಿಸೈಲ್‌ನ ಅಭಿವೃದ್ಧಿ ಪಡಿಸೋಕೆ ಪಾಕ್‌ನ ಪ್ರಯತ್ನಕ್ಕೆ ಇವು ಬೆಂಬಲ ಕೊಡ್ತಿದ್ವು ಅಂತ ಅಮೆರಿಕ ಆರೋಪ ಮಾಡಿದೆ. ಅಂದ್ಹಾಗೆ ಈ ಹಿಂದೆ ಒಟ್ಟು 35 ದೇಶಗಳು ಸೇರಿ MTCR ಅಂದ್ರೆ ಮಿಸೈಲ್‌ ಟೆಕ್ನಾಲಜಿ ಕಂಟ್ರೋಲ್‌ ರೆಜೀಮ್‌ ಅಂತ ಒಪ್ಪಂದ ಮಾಡ್ಕೊಂಡಿದ್ವು. ಇದ್ರ ಪ್ರಕಾರ ನ್ಯುಕ್ಲಿಯರ್‌, ಕೆಮಿಕಲ್‌ ಅಥ್ವಾ ಬೈಯಲಾಜಿಕಲ್‌ ವೆಪನ್‌ಗಳನ್ನ ಹೊತ್ತೊಯ್ಯೋ ಮಿಸೈಲ್‌ಗಳ ವಿಚಾರದಲ್ಲಿ ಮಾಹಿತಿ ಹಂಚಿಕೊಳ್ಳಬೇಕಿತ್ತು. ಜಗತ್ತಲ್ಲಿ ಮಿಸೈಲ್‌ ಉತ್ಪಾದನೆಯಲ್ಲಿ ಸ್ಪರ್ಧೆ ಉಂಟಾಗಬಾರದು, ಅಂತ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದ್ರೆ ಪಾಕಿಸ್ತಾನಕ್ಕೆ ಮಿಸೈಲ್‌ಗಳ ಅಭಿವೃದ್ಧಿಗೆ ಈ ಸಂಸ್ಥೆಗಳು ಬಿಡಿಭಾಗಗಳನ್ನ ಸಪ್ಲೈ ಮಾಡ್ತಿವೆ. ಇದು ಪಾಕಿಸ್ತಾನ ಹೆಚ್ಚಿನ ಮಿಸೈಲ್‌ ಹೊಂದೋಕೆ ಸಹಾಯ ಮಾಡುತ್ತೆ. ಹೀಗಾಗಿ ನಾವು ನಿರ್ಬಂಧ ಹೇರ್ತಿದ್ದೇವೆ ಅಂತ ಅಮೆರಿಕ ಸ್ಯಾಂಕ್ಷನ್‌ ಹಾಕಿದೆ.

-masthmagaa.com

Contact Us for Advertisement

Leave a Reply