ಇರಾನ್‌ ಸಂಸ್ಥೆಗಳ ಮೇಲೆ ಹೊಸ ನಿರ್ಬಂಧ ಹೇರಿದ ಅಮೆರಿಕ!

masthmagaa.com:

ಇಸ್ರೇಲ್‌-ಇರಾನ್‌ ಉದ್ವಿಗ್ನತೆ ನಡುವೆ ಇದೀಗ ಅಮೆರಿಕ ಇರಾನ್‌ ಮೇಲೆ ನಿರ್ಬಂಧ ಹೇರೋಕೆ ಮುಂದಾಗಿದೆ. ಇರಾನ್‌ ಸೇನೆಯ ಪರವಾಗಿ ದುರುದ್ದೇಶಪೂರಿತ ಸೈಬರ್‌ ಚಟುವಟಿಕೆಗಳಲ್ಲಿ ಭಾಗಿಯಾಗಿರೋ ಇರಾನ್‌ನ 4 ಮಂದಿ ಮತ್ತು 2 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ʻಇವ್ರು ಸೈಬರ್‌ ಕಾರ್ಯಚರಣೆ ಮೂಲಕ ಹತ್ತಾರು ಅಮೆರಿಕದ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಟಾರ್ಗೆಟ್‌ ಮಾಡಿದ್ದಾರೆ. ಅಮೆರಿಕದ ನಾಗರಿಕರಿಗೆ ಸಮಸ್ಯೆ ನೀಡಿದ್ದಾರೆʼ ಅಂತ ಅಮೆರಿಕದ ಟ್ರೆಷರಿ ಡಿಪಾರ್ಟ್‌ಮೆಂಟ್‌ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply