ಚಂದ್ರನ ಮೇಲೆ ಕಣ್ಣಿಟ್ಟ ಅಮೆರಿಕ! ಹೊಸ ʻನೋವಾ-ಸಿʼ ಲ್ಯಾಂಡರ್‌ ಸಜ್ಜು!

masthmagaa.com:

ಸುಮಾರು 50 ವರ್ಷಗಳ ಹಿಂದೆ ಚಂದ್ರನ ಮೇಲೆ ಲ್ಯಾಂಡ್‌ ಆಗಿ ಯಶಸ್ವಿಯಾದ ಅಮೆರಿಕ, ಆರ್ಟಿಮಿಸ್‌ ಮೂಲಕ ಮತ್ತದೇ ಪ್ರಯತ್ನ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಇದೀಗ ಅದ್ರ ಉಪಯೋಜನೆಯಾಗಿ ಮತ್ತೊಂದು ಲ್ಯಾಂಡಿಂಗ್‌ಗೆ ಕೈ ಹಾಕಿದೆ. ʻನೋವಾ-ಸಿʼ (Nova-C) ಅನ್ನೋ ಹೊಸ ಲ್ಯಾಂಡರ್‌ ನಿರ್ಮಾಣ ಮಾಡಿರೋ ಅಮೆರಿಕ, ಅದನ್ನ ಚಂದ್ರನತ್ತ ಸಾಗಿಸೋಕೆ ರೆಡಿಯಾಗಿದೆ. ಅಮೆರಿಕದ ಈ ಹೊಸ ಮಿಷನ್‌ ಇದೇ ಫೆಬ್ರುವರಿ 14 ರಂದು ಲಾಂಚ್‌ ಆಗಲಿದೆ. ಇದನ್ನ ಅಮೆರಿಕ ಮೂಲದ ಇಂಟ್ಯೂಟಿವ್‌ ಮಷೀನ್ಸ್‌ ಮತ್ತು ಸ್ಪೇಸ್‌ ಎಕ್ಸ್‌ ಕಂಪನಿಯ ಸಹೋಗದೊಂದಿಗೆ ತಯಾರಿಸಲಾಗಿದೆ. ಇನ್ನು ಈ ಲ್ಯಾಂಡರ್‌ ಫೆಬ್ರುವರಿ 22ಕ್ಕೆ ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡ್‌ ಆಗೋ ಸಾಧ್ಯತೆ ಇದೆ. ಹೀಗಂತ ನಾಸಾ ಫೆಬ್ರುವರಿ 07 ರಂದು ಹೇಳ್ಕೊಂಡಿದೆ. ಅಂದ್ಹಾಗೆ ಕಳೆದ ತಿಂಗಳಷ್ಟೇ ಅಮೆರಿಕದ ಪ್ರೈವೇಟ್‌ ಕಂಪನಿಗಳ ಸಹಯೋಗದೊಂದಿಗೆ ʻಪೆರಗ್ರೀನ್‌ʼ ಲ್ಯಾಂಡರ್‌ನ ಚಂದ್ರನತ್ರ ಕಳುಹಿಸಲಾಗಿತ್ತು. ಆದ್ರೆ ಈ ಮಿಷನ್‌ ಚಂದ್ರನತ್ರ ಸಾಗ್ತಿರೋವಾಗ್ಲೇ ಸರಿಯಾಗಿ ಕೆಲಸ ಮಾಡದೇ, ವಾಪಾಸ್‌ ಭೂಮಿಗೆ ಬಂದು ಬ್ಲಾಸ್ಟ್‌ ಆಗಿತ್ತು. ಇದಾದ ಕೆಲವೇ ವಾರಗಳಲ್ಲಿ ಅಮೆರಿಕ ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದೆ.

-masthmagaa.com

Contact Us for Advertisement

Leave a Reply