ಇಸ್ರೇಲ್‌ನ ಮಿಲಿಟರಿ ಯುನಿಟ್‌ ಮೇಲೆ ಅಮೆರಿಕ ನಿರ್ಬಂಧ ಹೇರಿಕೆ?

masthmagaa.com:

ಇಷ್ಟು ದಿನ ಗಾಜಾ ಯುದ್ಧದಲ್ಲಿ ಇಸ್ರೇಲ್‌ಗೆ ಭರಪೂರ ಸಪೋರ್ಟ್‌ ನೀಡಿರೋ ಅಮೆರಿಕ ಇದೀಗ ಇಸ್ರೇಲ್‌ ಮೇಲೆ ತಿರುಗಿ ಬೀಳೋ ಹಾಗೆ ಕಾಣ್ತಿದೆ. ಇಸ್ರೇಲ್‌ ರಕ್ಷಣಾ ಪಡೆಯ ಮಿಲಿಟರಿ ಯುನಿಟ್‌ ʻನೇತಜಾ ಯೆಹುದಾʼ (Netzah yehuda) ಮೇಲೆ ಅಮೆರಿಕ ನಿರ್ಬಂಧ ಹೇರೋ ಚಾನ್ಸಸ್‌ ಇದೆ ಅಂತೇಳಲಾಗ್ತಿದೆ. ವೆಸ್ಟ್‌ ಬ್ಯಾಂಕ್‌ನಲ್ಲಿರೋ ಪ್ಯಾಲೆಸ್ತೀನ್‌ ನಾಗರಿಕರ ಮೇಲೆ ದಾಳಿ ನಡೆಸಿ, ಮಾನವ ಹಕ್ಕುಗಳನ್ನ ಉಲ್ಲಂಘಿಸಿರೋ ಆರೋಪದ ಮೇಲೆ ಈ ರೀತಿ ಮಾಡಲಾಗುತ್ತೆ ಎನ್ನಲಾಗಿದೆ. ಇದಕ್ಕೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ರಿಯಾಕ್ಟ್‌ ಮಾಡಿ, ʻಇಸ್ರೇಲ್‌ ರಕ್ಷಣಾ ಪಡೆ ಮೇಲೆ ಈ ರೀತಿ ನಿರ್ಬಂಧ ಹೇರೋದು ಸರಿಯಲ್ಲʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply