ಅಮೆರಿಕನ್‌ ಪ್ರೆಸಿಡೆನ್ಸಿಯಲ್‌ ಚುನಾವಣೆ ಮುನ್ನ ಟ್ರಂಪ್‌ಗೆ ಮತ್ತೆ ಶಾಕ್!

masthmagaa.com:

ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಗದ್ದುಗೆ ಏರಲು ಹವಣಿಸ್ತಿರೊ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ವಿಘ್ನ ಎದುರಾಗಿದೆ. ಯಾಕಂದ್ರೆ ಇದೀಗ 2020ರ ಪ್ರೆಸಿಡೆನ್ಸಿಯಲ್‌ ಎಲೆಕ್ಷನ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲು ಅಮೆರಿಕನ್‌ ಸುಪ್ರೀಂಕೋರ್ಟ್‌ ಮುಂದಾಗಿದೆ. ಏಪ್ರೀಲ್‌ ಕೊನೆಯಲ್ಲಿ ಈ ವಿಚಾರಣೆ ನಡೆಸಲಿದ್ದು, ಜೂನ್‌ ಒಳಗೆ ತೀರ್ಪು ನೀಡೊ ಸಾಧ್ಯತೆ ಇದೆ ಎನ್ನಲಾಗಿದೆ. ಅಂದ್ಹಾಗೆ ತಮ್ಮ ಸೋಲಿನ ಭೀತಿಯಿಂದ 2020ರ ಪ್ರೆಸಿಡೆನ್ಸಿಯಲ್‌ ಚುನಾವಣೆಯ ಫಲಿತಾಂಶವನ್ನ ರದ್ದುಗಳಿಸಲು ಟ್ರಂಪ್‌ ಯತ್ನಿಸಿದ್ರು ಅನ್ನೊ ಆರೋಪ ಇತ್ತು. ಈ ಬಗ್ಗೆ ಕೇಸ್‌ ಕೂಡ ದಾಖಲಾಗಿತ್ತು. ಆದ್ರೆ ಕೊಲಂಬಿಯಾ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ಈ ವಿಚಾರ ತಿರಸ್ಕಾರಗೊಂಡಿತ್ತು. ಬಳಿಕ ವಕೀಲರೊಬ್ರು ಮತ್ತೆ ಈ ವಿಚಾರವಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ರು. ಹೀಗಾಗಿ ಇದೀಗ ಖುದ್ದು ಸುಪ್ರೀಂಕೋರ್ಟ್‌ ಈ ವಿಚಾರಣೆ ನಡೆಸಲು ತಿರ್ಮಾನಿಸಿದೆ. ಅಂದ್ಹಾಗೆ ಟ್ರಂಪ್‌ ಮೇಲೆ‌ ನ್ಯೂಯಾರ್ಕ್ ವಂಚನೆ ಕೇಸ್ ಸೇರಿದಂತೆ ಮೂರು ಕ್ರಿಮಿನಲ್‌ ಕೇಸ್‌ ಬೇರೆ ಇವೆ. ಆ ವಂಚನೆ ಕೇಸ್‌ ವಿಚಾರಣೆ ಮಾರ್ಚ್‌ 25 ರಂದು ನಡೆಯಲಿದೆ. ಇವುಗಳ ಮಧ್ಯೆ ಈ 4ನೇ ಕೇಸ್‌ ಮುನ್ನಲೆಗೆ ಬಂದಿದ್ದು ಟ್ರಂಪ್‌ರ ಪ್ರೆಸಿಡೆನ್ಸಿಯಲ್‌ ಎಲೆಕ್ಷನ್‌ ಮೇಲೆ ಭಾರಿ ಪರಿಣಾಮ ಬಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply