ನೈಜರ್‌ನಿಂದ ವಾಪಸ್ಸಾಗ್ತಿದೆ ಅಮೆರಿಕ ಸೇನೆ: ರಷ್ಯಾಗೆ ಮೇಲುಗೈ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಆಫ್ರಿಕಾದ ನೈಜರ್‌ ರಾಷ್ಟ್ರದಿಂದ ಇದೀಗ ಅಮೆರಿಕ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳೊಕೆ ಮುಂದಾಗಿದೆ. ಕಳೆದ ತಿಂಗಳು ನೈಜರ್‌ ಸರ್ಕಾರ, ʻನಮ್ಮ ದೇಶದಿಂದ ನಿಮ್ಮ ಸೇನೆಯನ್ನ ವಾಪಾಸ್‌ ಕರ್ಕೊಳ್ಳಿʼ ಅಂತ ಅಮೆರಿಕಗೆ ಹೇಳಿತ್ತು. ಹೀಗಾಗಿ ಅಮೆರಿಕ ಈಗ ತನ್ನ ಸಾವಿರಕ್ಕೂ ಅಧಿಕ ಸೈನಿಕರನ್ನ ವಾಪಾಸ್‌ ಕರೆಸ್ಕೊಳ್ತಿದೆ. ಅಂದ್ಹಾಗೆ ಜಿಹಾದಿ ಉಗ್ರರ ದಾಳಿಗಳನ್ನ ಹಿಮ್ಮೆಟಿಸಲು ನೈಜರ್‌, ತನ್ನ ದೇಶಕ್ಕೆ ರಕ್ಷಣೆ ನೀಡೊ ಸಂಬಂಧ ಅಮೆರಿಕ ಸೇನೆ ಜೊತೆ 12 ವರ್ಷಗಳ ಹಿಂದೆಯೇ ಒಪ್ಪಂದ ಮಾಡ್ಕೊಂಡಿತ್ತು. ಆದ್ರೆ ಈಗ ಒಪ್ಪಂದ ವಿಫಲವಾದ ಹಿನ್ನಲ್ಲೆ ಅಮೆರಿಕ ಸೇನೆ ಹೊರ ನಡೀತಿದೆ. ಇನ್ನು ಕಳೆದ ವರ್ಷ ಜುಲೈನಲ್ಲಿ ನೈಜರ್‌ ಅಧ್ಯಕ್ಷ ಸ್ಥಾನದಿಂದ ಮೊಹಮ್ಮದ್‌ ಬಾಜೂಮ್‌ ಕೆಳಗಿಳಿದ ನಂತ್ರ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಗಳು ಹೆಚ್ಚಾಗಿದ್ವು. ನೈಜರ್‌ನ ಪಕ್ಕದ ಮಾಲಿ, ಬುರ್ಕಿನಾ ಫಾಸ್ಕೊ ದೇಶಗಳು ರಷ್ಯಾ ಜೊತೆ ಕ್ಲೋಸ್‌ ಆಗಿದ್ದು, ಆ ದೇಶಗಳಲ್ಲಿ ರಷ್ಯಾ ಸೇನೆ ಕಾರ್ಯ ನಿರ್ವಹಿಸ್ತಿದೆ. ಹಾಗೆಯೇ ನೈಜರ್‌ ಅಧ್ಯಕ್ಷರು ಕೂಡ ಸದ್ಯ ರಷ್ಯಾ ಜೊತೆ ನಿಕಟ ಸಂಬಂಧ ಹೊಂದಿದ್ದು, ಅಮೆರಿಕ ಸೇನೆ ವಾಪಾಸ್‌ ಹೋಗಲು ಕಾರಣವೆನ್ನಲಾಗ್ತಿದೆ. ಈ ಮೂಲಕ ಆಫ್ರಿಕಾದಲ್ಲಿ ಅಮೆರಿಕ ವಿರುದ್ಧ ರಷ್ಯಾಗೆ ಒಂದುಮಟ್ಟಿಗಿನ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

-masthmagaa.com

Contact Us for Advertisement

Leave a Reply