ರಷ್ಯಾದಲ್ಲಿರುವ ಅಮೆರಿಕನ್ನರು ಕೂಡಲೇ ಅಲ್ಲಿಂದ ಹೊರಡಿ ಎಂದ ಅಮೆರಿಕ! ಕಾರಣವೇನು?

masthmagaa.com:

ರಷ್ಯಾದಲ್ಲಿರುವ ಅಮೆರಿಕದ ನಾಗರಿಕರು ತಕ್ಷಣವೇ ರಷ್ಯಾವನ್ನ ತೊರೆಯುವಂತೆ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಸೆಕ್ರೆಟರಿ ಆಂಥನಿ ಬ್ಲಿಂಕನ್‌ ಹೇಳಿದ್ದಾರೆ. ಇತ್ತೀಚೆಗೆ ಗೂಢಚರ್ಯೆ ನಡೆಸಿರುವ ಆರೋಪದ ಮೇಲೆ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ನ ಪತ್ರಕರ್ತರೊಬ್ಬರನ್ನ ಬಂಧಿಸಿರೋದಾಗಿ ರಷ್ಯಾ ಹೇಳಿತ್ತು. ರಹಸ್ಯ ಮಾಹಿತಿಗಳನ್ನ ಕಲೆಹಾಕಲು ಪ್ರಯತ್ನಿಸುತ್ತಿದ್ದ ಜರ್ನಲಿಸ್ಟ್‌ ಇವಾನ್‌ ಗೆರ್ಸ್‌ಕೊವಿಚ್‌ ಅನ್ನೋರನ್ನ ರಷ್ಯಾದಲ್ಲಿ ಬಂಧಿಸಲಾಗಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಪತ್ರಕರ್ತರೊಬ್ರನ್ನ ಬಂಧಿಸಿರುವ ವಿಷಯ ತಿಳಿದು ನಾವು ಕಳವಳಗೊಂಡಿದ್ದೇವೆ. ಅಮೆರಿಕನ್ನರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹೀಗಾಗಿ ರಷ್ಯಾದಲ್ಲಿರುವ ಅಮೆರಿಕನ್ನರು ದಯವಿಟ್ಟು ತಕ್ಷಣವೇ ರಷ್ಯಾ ಬಿಟ್ಟು ಬನ್ನಿ ಅಂತ ಬ್ಲಿಂಕನ್ ಮನವಿ ಮಾಡಿದ್ದಾರೆ. ಇತ್ತ ಅಮೆರಿಕನ್ನರನ್ನ ರಷ್ಯಾ ಟಾರ್ಗೆಟ್‌ ಮಾಡ್ತಿರೋದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಇದನ್ನ ಖಂಡಿಸುತ್ತೇವೆ ಅಂತ ವೈಟ್‌ಹೌಸ್‌ ಪ್ರೆಸ್‌ ಸೆಕ್ರೆಟರಿ ಕರೀನ್‌ ಜೀನ್‌ ಪಿಯರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply