ಇರಾನ್‌ ಜೊತೆ ಪಾಕ್‌ ಡೀಲ್: ಪಾಕ್‌ಗೆ ವಾರ್ನಿಂಗ್‌ ಕೊಟ್ಟ ಅಮೆರಿಕ!

masthmagaa.com:

ಒಂದು ಕಾಲದಲ್ಲಿ ಗೆಳೆಯ ಗೆಳತಿಯರಂತಿದ್ದು ಅಪ್ಪಿ ಮುದ್ದಾಡ್ತಿದ್ದ ಅಮೆರಿಕ ಹಾಗೂ ಪಾಕಿಸ್ತಾನದ ಮಧ್ಯೆ ಈಗ ದೊಡ್ಡ ಬಿರುಕು ಏಳೋ ಸೂಚನೆ ಕಾಣ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಈಗ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಬೇಕಾಗುತ್ತೆ ಅಂತ ಖುದ್ದು ಅಮೆರಿಕ ಬಿಗ್‌ ವಾರ್ನಿಂಗ್‌ ಕೊಟ್ಟಿದೆ. ಸಧ್ಯ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪಾಕಿಸ್ತಾನದಲ್ಲಿ ಬೀಡು ಬಿಟ್ಟಿದ್ದು ಹಲವು ಒಪ್ಪಂದಗಳು ಆಗ್ತಿವೆ.. ಇದಕ್ಕೆ ಪಾಕಿಸ್ತಾನ ಕೂಡ ಹಲ್ಲು ಕಿಸಿಕೊಂಡು ಇರಾನ್‌ ಮತ್ತು ನಾವು ಅಣ್ಣತಮ್ಮಂದ್ರು ಅಂತ ಹೇಳಿಕೆ ಕೊಟ್ಟಿತ್ತು. ಇದಕ್ಕೆ ಕುದಿಯುತ್ತಿರೋ ಅಮೆರಿಕ, ಇರಾನ್‌ ಜೊತೆಗೆ ವ್ಯಾಪಾರ ಮಾಡಿದ್ರೆ ನಾವು ಸುಮ್ನಿರಲ್ಲ.. ಪಾಕಿಸ್ತಾನದ ವಿರುದ್ದ ಶಿಸ್ತು ಕ್ರಮ ಕೈಗೊಳ್ಳೊದನ್ನ ಮುಂದುವರೆಸಬೇಕಾಗುತ್ತೆ. ಅಮೆರಿಕದಿಂದ ನಿರ್ಬಂಧಗಳ ಅಪಾಯವನ್ನ ಎದುರಿಸಬೇಕಾಗುತ್ತೆ ಅಂತ ಅಮೆರಿಕ ಹೇಳಿದೆ. ಈ ನಿರ್ಬಂಧದಲ್ಲಿ ಪಾಕ್‌ನ ಬ್ಯಾಲೆಸ್ಟಿಕ್‌ ಮಿಸೈಲ್‌ ಪ್ರೋಗ್ರಾಂ ಮತ್ತು ಸಮೂಹ ನಾಶದ ಶಸ್ತ್ರಾಸ್ತ್ರಗಳ ಪ್ರೋಗ್ರಾಂ ಕೂಡ ಇರಬೋದು ಅನ್ನೋದನ್ನ ಅಮೆರಿಕ ಹೇಳಿದೆ. ಪಾಕಿಸ್ತಾನಕ್ಕೆ ಇವುಗಳನ್ನ ತಯಾರು ಮಾಡೋ ನಿಟ್ಟಿನಲ್ಲಿ ಸಂಬಂಧಪಟ್ಟ ಚಟುವಟಿಕೆಗಳು ಚೀನಾ ಮತ್ತು ಬೆಲರೂಸ್‌ನಲ್ಲಿ ನಡಿತಿವೆ ಅಂತಲೂ ಅಮೆರಿಕ ತಿಳಿಸಿದೆ. ಅಂದ್ಹಾಗೆ ಇಮ್ರಾನ್‌ ಖಾನ್‌ರನ್ನ ಜೈಲಿಗೆ ಅಟ್ಟಿ ಶೆಹಬಾಜ್‌ ಷರೀಫ್‌ ಮತ್ತೆ ಪಿಎಂ ಆದ್ಮೇಲೆ ಅಮೆರಿಕ ಹಾಗೂ ಪಾಕಿಸ್ತಾನದ ಸಂಬಂಧ ಉತ್ತಮಗೊಳ್ಳುತ್ತೆ ಅಂತ ಪಾಕಿಸ್ತಾನದಲ್ಲಿ ಭಾರೀ ನಿರೀಕ್ಷೆ ಇಟ್ಕೊಳ್ಳಲಾಗಿತ್ತು. ಆದ್ರೆ ಅದ್ಯಾಕೋ ಅಮೆರಿಕ ಕಳೆದ ಎರಡು ಮೂರು ವಾರಗಳಿಂದ ಪಾಕಿಗಳ ಮೇಲೆ ಮುನಿದಿರೋ ಥರ ಕಾಣಿಸ್ತಿದೆ. ಮೊನ್ನೆಯಷ್ಟೇ ಪಾಕ್‌ನ ಮಿಸೈಲ್‌ ಡೆವಲಪ್‌ಮೆಂಟ್‌ ಪ್ರೊಗ್ರಾಂಗಳಿಗೆ ಪಾಕ್‌ ನಿರ್ಬಂಧ ಹೇರಿತ್ತು. ಮತ್ತು ಇತ್ತೀಚಿಗೆ ಪಾಕಿಸ್ತಾನದಲ್ಲಿ ಅತಿಯಾದ ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಿದೆ ಅಂತ ಅಮೆರಿಕ ಆರೋಪ ಮಾಡಿತ್ತು. ಈಗ ಇನ್ನಷ್ಟು ಸ್ಯಾಂಕ್ಷನ್‌ ಹೇರಬೇಕಾಗುತ್ತೆ ಅಂತ ಅಮೆರಿಕ ಹೇಳ್ತಿದೆ. ಬಹುಶಃ ಶೆಹಬಾಜ್‌ ಕೂಡ ಚೀನಾ ಪರ ವಾಲ್ತಿರೋದು ಮತ್ತು ಇರಾನ್‌ ಜೊತೆಗೆ ಗುರುತಿಸಿಕೊಳ್ತಿರೋದು ಅಮೆರಿಕಗೆ ಇಷ್ಟ ಇಲ್ಲ ಅಂತ ಕಾಣ್ಸುತ್ತೆ. ಮೊನ್ನೆ ಕೂಡ ನವಾಜ್‌ ಷರೀಫ್‌ ಚೀನಾಗೆ ಪ್ರೈವೇಟ್‌ ಭೇಟಿ ಕೊಟ್ಟಿದ್ರು. ಚಿಕಿತ್ಸೆಗೆ ಅಂತ ಹೇಳಿದ್ರು. ನಿಮಗೆ ಗೊತ್ತಿರಲಿ ಇವತ್ತಿಗೂ ಪಾಕ್‌ನಲ್ಲಿ ಶೆಹಬಾಜ್‌ ಪ್ರಧಾನಿಯಾಗಿದ್ರೂ ಅದರ ಹಿಂದೆ ಇದ್ದು ಆಡಳಿತ ನಡೆಸ್ತಿರೋದು ನವಾಜ್‌ ಅನ್ನೋ ಮಾತಿದೆ. ಸೋ ನವಾಜ್‌ ಇವತ್ತಿಗೂ ಪಾಕ್‌ ಆಡಳಿತದ ಪವರ್‌ಫುಲ್‌ ವ್ಯಕ್ತಿ. ಹೀಗಾಗಿ ಅವರ ಚೈನಾ ಭೇಟಿಗೆ ಅಮೆರಿಕ ಕೋಪಗೊಂಡಿರಬೋದು ಅನ್ನೋ ವಿಶ್ಲೇಷಣೆಗಳೆಲ್ಲಾ ನಡೀತಿವೆ.

-masthmagaa.com

Contact Us for Advertisement

Leave a Reply