ಅಮೆರಿಕದಲ್ಲಿ ಭೀಕರ ಕಾಡ್ಗಿಚ್ಚು: 2 ಬಲಿ, ಸ್ಪೇಸ್‌ನಿಂದ ಕಂಡ ಬೆಂಕಿ

masthmagaa.com:

ಅಮೆರಿಕದ ಟೆಕ್ಸಾಸ್‌ ಹಾಗೂ ಓಕ್ಲಹೋಮ ರಾಜ್ಯಗಳಲ್ಲಿ ಉಂಟಾಗಿರೋ ಭಾರೀ ಕಾಳ್ಗಿಚ್ಚು ಅಲ್ಲಿನ ಜನಜೀವನ, ವನ್ಯಜೀವಿಗಳನ್ನ ಅಸ್ತ ವ್ಯಸ್ತ ಮಾಡಿದೆ. ಕಾಳ್ಗಿಚ್ಚಿಗೆ ಟೆಕ್ಸಾಸ್‌ನಲ್ಲೇ ಸುಮಾರು 10 ಲಕ್ಷ ಎಕರೆಗೂ ಹೆಚ್ಚು ಅರಣ್ಯ ಸುಟ್ಟು ಕರಕಲಾಗಿದೆ. ಅಂದ್ರೆ ಸುಮಾರು ದೆಹಲಿ ನಗರದ ಮೂರು ಪಟ್ಟು ಅರಣ್ಯ ನಾಶವಾಗಿದೆ. ಅಮೆರಿಕದ ಈ ಕಾಳ್ಗಿಚ್ಚು ಸ್ಪೇಸ್‌ನಿಂದ ಕೂಡ ಕಾಣೋ ಅಷ್ಟು ಭೀಕರವಾಗಿದೆ ಅಂತ ವರದಿಯಾಗಿದೆ. ಕಾಳ್ಗಿಚ್ಚಿಗೆ ಈಗಾಗ್ಲೆ ಇಬ್ಬರು ಬಲಿಯಾಗಿದ್ದು, ಅಪಾರ ಪ್ರಮಾಣದ ಜೀವವೈವಿಧ್ಯತೆ ನಾಶವಾಗಿದೆ. ಬೆಂಕಿಗೆ ಟೆಲಿಪೋನ್‌ ಹಾಗೂ ವಿದ್ಯುತ್‌ ಲೈನ್‌ಗಳು ಕರಗಿವೆ.

-masthmagaa.com

Contact Us for Advertisement

Leave a Reply