ಭಾರತೀಯರಿಗೆ ವೀಸಾ ನೀಡೋ ಪ್ರಕ್ರಿಯೆಯನ್ನ ವೇಗಗೊಳಿಸಿದ ಅಮೆರಿಕ!

masthmagaa.com:

ಭಾರತದಲ್ಲಿ ವೀಸಾ ನೀಡೋ ಪ್ರಕ್ರಿಯೆಯನ್ನ ಚುರುಗೊಳಿಸುವ ಸಲುವಾಗಿ ಅಮೆರಿಕ ಕೆಲ ನೂತನ ಕ್ರಮಗಳಿಗೆ ಚಾಲನೆ ನೀಡಿದೆ. ಮೊದಲ ಬಾರಿ ವೀಸಾಗೆ ಅರ್ಜಿ ಹಾಕೋರಿಗೆ ವಿಶೇಷ ಸಂದರ್ಶನ ನಡೆಸಲಾಗುತ್ತೆ. ಈ ಹಿನ್ನಲೆಯಲ್ಲಿ ಕೌನ್ಸುಲೇಟ್‌ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನ ಹೆಚ್ಚಿಸಲಾಗಿದೆ. ಜನವರಿ 21ರಂದು ಈ ನೂತನ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಇದ್ರ ಭಾಗವಾಗಿ ದೆಹಲಿಯಲ್ಲಿರೋ ರಾಯಭಾರ ಕಚೇರಿ ಸೇರಿದಂತೆ ಮುಂಬೈ, ಚೆನ್ನೈ, ಕೊಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲಿರೋ ಕೌನ್ಸುಲೇಟ್‌ ಕಚೇರಿಗಳಲ್ಲಿ ʻಶನಿವಾರ ವಿಶೇಷ ಸಂದರ್ಶನʼ ಹೆಸರಿನಲ್ಲಿ ವೀಸಾ ನೀಡೋಕೆ ಇಂಟರ್‌ವ್ಯೂ ಮಾಡಲಾಯ್ತು ಅಂತ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ. ಇತ್ತ ಟೆಕ್‌ ಕಂಪನಿಗಳ ಜಾಬ್ಸ್‌ ಕಟ್‌ನಿಂದ ಕೆಲಸ ಕಳೆದುಕೊಂಡಿರೋ ಅಮೆರಿಕದಲ್ಲಿರುವ ಭಾರತೀಯರು ನೂತನ ಕೆಲಸಗಳಿಗಾಗಿ ಹುಡುಕಾಟ ನಡೆಸ್ತಿದಾರೆ. ತಮ್ಮ ವರ್ಕ್‌ ವೀಸಾ ಅಡಿಯಲ್ಲಿ ನಿಗದಿಪಡಿಸಲಾದ ಅವಧಿಯೊಳಗೆ ಕೆಲಸಗಳನ್ನ ಹುಡುಕಿಕೊಳ್ಳೋಕೆ ಕಷ್ಟ ಪಡ್ತಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply