ಪ್ರಶ್ನೆ ಪತ್ರಿಕೆ ಸೋರಿಕೆ: ಫೆ.17,18ರ ಯುಪಿಯ PC ಎಕ್ಸಾಮ್‌ಗಳು ರದ್ದು!

masthmagaa.com:

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಇತ್ತೀಚೆಗೆ ನಡೆಸಿದ್ದ ಪೊಲೀಸ್‌ ಕಾನ್ಸಟೇಬಲ್‌ ನೇಮಕಾತಿ ಪರೀಕ್ಷೆಯನ್ನ ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ. ಜೊತೆಗೆ ಮುಂದಿನ 6 ತಿಂಗಳ ಒಳಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಅಂತ ಸ್ಪಷ್ಟ ಪಡಿಸಿದೆ. ಯುಪಿಯಲ್ಲಿ ಫೆಬ್ರುವರಿ 17, 18ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರವಾಗಿ ತನಿಖೆ ನಡೆಸಲು ಸರ್ಕಾರ ಸ್ಪೆಷಲ್‌ ಟಾಸ್ಕ್‌ ಪೋರ್ಸ್‌ ನಿಯೋಜಿಸಿದ್ದು, ಪ್ರಕರಣದಲ್ಲಿ ಭಾಗಿಯಾದವ್ರ ವಿರುದ್ದ FIR ದಾಖಲಿಸುವಂತೆ ಸೂಚಿಸಿದೆ. ಇನ್ನು ಫೆಬ್ರುವರಿ 17, 18 ರಂದು ನಡೆದ ನೇಮಕಾತಿ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದ 48 ಲಕ್ಷ ಅಭ್ಯರ್ಥಿಗಳ ಪೈಕಿ 43 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರು. ಆದ್ರೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಯುಪಿ ಸರ್ಕಾರ ಮತ್ತೊಮ್ಮೆ ಮರು ಪರೀಕ್ಷೆ ನಡೆಸಲಿದೆ.

-masthmagaa.com

Contact Us for Advertisement

Leave a Reply