ಸಾಲಭರಿತ ವೇದಾಂತಗೆ ಸಾಲ ತೀರೋದೆ ಮುಂದಿನ ಗುರಿ!

masthmagaa.com:

ಸಾಲದ ಸುಳಿಯಲ್ಲಿರೋ ಮೈನಿಂಗ್‌ ಕಂಪನಿ ವೇದಾಂತ ಗ್ರೂಪ್ಸ್‌ ಇತ್ತೀಚೆಗೆ ತನ್ನ ಒಂದಷ್ಟು ಷೇರುಗಳನ್ನ ಹೂಡಿಕೆದಾರರಿಂದ ಹಿಂತೆಗೆದುಕೊಂಡಿತ್ತು. ಇದೀಗ ಮುಂದಿನ ಮೂರು ವರ್ಷಗಳಲ್ಲಿ ತನ್ನ ಮೂರು ಬಿಲಿಯನ್‌ ಡಾಲರ್‌ ಸಾಲವನ್ನ ಡೀಲಿವರೇಜ್‌ ಮಾಡೋಕೆ ಕಂಪನಿ ಮುಂದಾಗಿದೆ. ಅಂದ್ರೆ ಸದ್ಯ ಇರೋ ಸಾಲ ತೀರೋಕೆ ಕ್ರಮಗಳನ್ನ ತಗೊಳುತ್ತೆ ಅಂತ ಕಂಪನಿ ಹೇಳಿದೆ. ಕಂಪನಿಗೆ ಸುಮಾರು 1.5 ಬಿಲಿಯನ್‌ ಡಾಲರ್‌ ಸಾಲವಿದ್ದು, 2025ಕ್ಕೆ ಕಂಪನಿಯ ಆದಾಯ 3.5ರಿಂದ 4 ಬಿಲಿಯನ್‌ ಡಾಲರ್ ಇರಲಿದೆ ಅನ್ನೋ ಅಂದಾಜಿದೆ. ಸೋ ಸಾಲ ತೀರಿಸೋದು ಸಂಸ್ಥೆಯ ಮುಖ್ಯ ಉದ್ದೇಶ ಅಂತ ಕಂಪನಿ ಹೇಳಿಕೊಂಡಿದೆ.‌ ಅಲ್ಲದೆ ಸದ್ಯಕ್ಕೆ ಕಂಪನಿ ಷೇರುಗಳನ್ನ ಮಾರಾಟ ಮಾಡೋ ಯೋಚನೆ ಇಲ್ಲ ಅಂತಲೂ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply