ಟ್ರಂಪ್‌ ಮೇಲೆ ಮತ್ತೊಂದು ದೋಷಾರೋಪಣೆ?

masthmagaa.com:

ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಳಿಯೋಕೆ ತಯಾರಿ ನಡೆಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. 2021 ಜನವರಿ 6ರಂದು ನಡೆದ ಕ್ಯಾಪಿಟೋಲ್‌ ದಂಗೆಗೆ ಸಂಬಂಧಿಸಿದಂತೆ ಟ್ರಂಪ್‌ ಮೇಲೆ ದೋಷಾರೋಪಣೆ ಹೊರಿಸಲಾಗುತ್ತೆ ಅನ್ನೊ ಮಾಹಿತಿ ಬಂದಿದೆ. ಇತ್ತೀಚೆಗಷ್ಟೆ ತಮ್ಮ ಆಡಳಿತ ಸಮಯದಲ್ಲಿ ಕೆಲವು ರಹಸ್ಯ ದಾಖಲೆಗಳನ್ನ ಅಕ್ರಮವಾಗಿ ಇಟ್ಕೊಂಡಿದ್ದಾರೆ ಅಂತ ದೋಷಾರೋಪಣೆ ಹೊರಿಸಲಾಗಿತ್ತು. ಅಷ್ಟೆ ಅಲ್ದೆ ಪಾರ್ನ್‌ ಸ್ಟಾರ್‌ ಒಬ್ರ ಜೊತೆಗಿನ ತಮ್ಮ ಅಕ್ರಮ ಸಂಬಂಧವನ್ನ ರಿವೀಲ್‌ ಮಾಡದಂತೆ ಹಣ ನೀಡಿದ್ರು ಅನ್ನೊ ಆರೋಪವನ್ನ ಕೂಡ ಟ್ರಂಪ್‌ ಎದುರಿಸುತ್ತಿದ್ದಾರೆ. ಇದೀಗ ಇನ್ನೊಂದ್‌ ದೋಷಾರೋಪಣೆ ಹೊರಿಸಲು ತಯಾರಿ ನಡೆಸಲಾಗ್ತಿದ್ದು, ಇದ್ರಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ರಿಗೆ ಹಿನ್ನಡೆಯಾಗಲಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಆದ್ರೆ ಟ್ರಂಪ್‌ ಮಾತ್ರ ನನ್ನನ್ನ ಟಾರ್ಗೆಟ್‌ ಮಾಡಲಾಗಿದೆ, ತಮ್ಮ ಪೊಲಿಟಿಕಲ್‌ ಕರಿಯರ್‌ನ್ನ ಮುಗಿಸೋಕೆ ಜೋ ಬೈಡನ್‌ ಅವ್ರ ಆಡಳಿತ ನ್ಯಾಯಾಂಗ ಇಲಾಖೆಯನ್ನ ಆಯುಧವಾಗಿ ಬಳಸುತ್ತಿದೆ ಅಂತ ಟ್ರಂಪ್‌ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply