ಜಮ್ಮು-ಕಾಶ್ಮೀರ: ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾದ 5 ಹೌಸ್‌ಬೋಟ್‌ಗಳು

masthmagaa.com:

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ದಾಲ್‌ ಸರೋವರದ ಬಳಿಯ 9ನೇ ಘಟ್ಟದಲ್ಲಿ ಹೌಸ್‌ಬೋಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಿಗ್ಗೆ ನಡೆದಿದೆ. ಇದರಲ್ಲಿ ಐದು ಹೌಸ್‌ಬೋಟ್‌ಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದ್ದು, ಅನೇಕ ಹೌಸ್‌ಬೋಟ್‌ಗಳು ಡ್ಯಾಮೇಜ್‌ ಆಗಿವೆ. ಬೆಳಿಗ್ಗೆ ಧಿಡೀರ್‌ ಹೊತ್ತಿಕೊಂಡ ಬೆಂಕಿ ಆರಿಸುವಷ್ಟರಲ್ಲಿ ಹಾನಿ ಉಂಟಾಗಿದೆ ಅಂತ ಪೋಲಿಸರು ಹೇಳಿದ್ದಾರೆ. ಇನ್ನು ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಅನ್ನೋದು ತಿಳಿದು ಬಂದಿಲ್ಲ.

-masthmagaa.com

Contact Us for Advertisement

Leave a Reply