ರೈಲಿನಲ್ಲಿ ಏಕಕಾಲದಲ್ಲಿ ನಮಾಜ್‌- ಹನುಮಾನ್‌ ಚಾಲೀಸಾ ವಿಡಿಯೋ ವೈರಲ್‌!

masthmagaa.com:

ಚಲಿಸುತ್ತಿರುವ ರೈಲೊಂದ್ರಲ್ಲಿ ಒಂದೇ ಟೈಮ್‌ನಲ್ಲಿ ನಮಾಜ್‌ ಹಾಗೂ ಹನುಮಾನ ಚಾಲೀಸಾ ಓದಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್‌ ಮಾಡ್ತಿರೋದು ಕಂಡು ಬಂದಿದೆ. ಇದೇ ವೇಳೆ ಕೆಲವು ಹಿಂದೂ ಯುವಕರು ಜೋರಾಗಿ ಹನುಮಾನ್‌ ಚಾಲೀಸಾ ಹೇಳ್ತಿರೋದು ರೆಕಾರ್ಡ್‌ ಆಗಿದ್ದು, ಘಟನೆ ಎಲ್ಲಿ? ಯಾವಾಗ? ನಡೆದಿದ್ದು ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೊ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಇದನ್ನ ಕೋಮು ಸಾಮರಸ್ಯ. ಇದು ಭಾರತದಲ್ಲಿ ಮಾತ್ರ ಸಾಧ್ಯ ಅಂತ ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವು ಹಿಂದೂ ಪರ ಸಂಘಟನೆಗಳು ಯುವಕರನ್ನ ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಪ್ರಚೋದನೆ ಎಂದು ಟೀಕಿಸುತ್ತಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರು ಯುವಕರು ಹನುಮಾನ್ ಚಾಲೀಸಾ ಪಠಣೆ ಮಾಡುತ್ತಿದ್ದಾಗ ಮುಸ್ಲಿಂ ವ್ಯಕ್ತಿ ನಮಾಜ್ ಗೆ ಮುಂದಾಗಿರಬಹುದು. ಆ ಸಾಧ್ಯತೆ ಕೂಡ ಇದೆ ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply