ವಿಜಯಪುರ: ಮಳೆಗಾಗಿ ಶವಗಳಿಗೆ ನೀರುಣಿಸಿದ ಗ್ರಾಮಸ್ಥರು

masthmagaa.com:

ರಾಜ್ಯದಲ್ಲಿ ಇನ್ನೂ ರೈತರಿಗೆ ಸರಿಯಾಗಿ ವರುಣನ ಕೃಪೆ ದೊರಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ಮಳೆ ಲೇಟ್‌ ಆದ್ರೆ ಮಳೆಗೆ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆ ಮದುವೆ, ದೇವರಿಗೆ ನೀರುಣಿಸೋದು ಹೀಗೆ ಅನೇಕ ರೀತಿಯ ಆಚರಣೆಗಳನ್ನ ಮಾಡ್ತಾರೆ. ಆದ್ರೆ ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ಸಶ್ಮಾನದಲ್ಲಿ ಹೂತಿರುವ ಸುಮಾರು 50 ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ಮಾಡಲಾಗಿದೆ. ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾದಿಗಳನ್ನ ಅಗೆದು ಕೊಳವೆ ಮೂಲಕ ಶವಗಳ ಬಾಯಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದ್ದಾರೆ. ಕಾಕತಾಳಿಯ ಅನ್ನೊ ರೀತಿ 20 ನಿಮಿಷಗಳ ಬಳಿಕ ಗ್ರಾಮದಲ್ಲಿ ಧಾರಕಾರ ಮಳೆಯಾಗಿದೆ.

-masthmagaa.com

Contact Us for Advertisement

Leave a Reply