ಬಿಟೌನ್ ಮಸ್ತಿ.. ಶಾರುಕ್, ಕರಿನಾ, ಕರಿಶ್ಮಾ, ಕರಣ್ ಬಿಂದಾಸ್ ಸ್ಟೆಪ್!

ಬಿಟೌನ್ ಮಂದಿ ಒಂದೆಡೆ ಸೇರಿದ್ರೆ ಮುಗೀತು.. ಅಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಇದ್ದೇ ಇರುತ್ತೆ. ಸದ್ಯ ಶಾರುಖ್ ಖಾನ್, ಗೌರಿ ಖಾನ್, ಕರಿನಾ ಕಪೂರ್, ಕರಿಶ್ಮಾ ಕಪೂರ್ ಹಾಗೂ ಕರುಣ್ ಜೋಹಾರ್ ಜೊತೆ ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ವೇದಿಕೆಯಾಗಿದ್ದು, ಮುಂಬೈನಲ್ಲಿ ನಡೆಯುತ್ತಿರುವ ಅರ್ಮಾನ್ ಜೈನ್ ಹಾಗೂ ಅನಿಷಾ ಮಲ್ಹೋತ್ರಾ ಮದ್ವೆ ಆರತಕ್ಷತೆಯಲ್ಲಿ.. ಗೌರಿಖಾನ್ ಹಾಗೂ ಶಾರುಖ್ ಖಾನ್ ತನು ವೆಡ್ಸ್ ಮನು ಸಿನಿಮಾದ ಶಾದಿ ಗಲಿ ಹಾಡಿಗೆ ಹೆಜ್ಜೆ ಹಾಕಿದ್ರೆ, ಕರಣ್ ಜೋಹರ್, ಕರೀನಾ, ಕರೀಶ್ಮಾ ಕಬಿ ಖುಷಿ ಕಬಿ ಘಮ್ ಸಿನಿಮಾದ ಬೋಲೆ ಚೂಡಿಯಾನ್ ಹಾಡಿಗೆ ಸ್ಟೆಪ್ಸ್ ಹಾಕಿದ್ರು. ಸ್ಟಾರ‍್ಸ್ ಬಿಂದಾಸ್ ಡ್ಯಾನ್ಸ್ ದೃಶ್ಯವನ್ನ ಅವರ ಫ್ಯಾನ್ಸ್ ಕ್ಲಬ್‌ನವರು ಇನ್‌ಸ್ಟ್ರಾಗ್ರಾಂನಲ್ಲಿ ಶೇರ್ ಮಾಡಿದ್ದು, ಇದನ್ನ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Contact Us for Advertisement

Leave a Reply