ಮೋದಿ ಜಿ ದಯವಿಟ್ಟು ನಮಗೆ ಉತ್ತಮ ಶಾಲೆಯನ್ನ ನಿರ್ಮಿಸಿಕೊಡಿ ಎಂದು ಮನವಿ ಮಾಡಿದ ಜಮ್ಮುವಿನ ಬಾಲಕಿ!

masthmagaa.com:

ಮೋದಿ ಜಿ ಪ್ಲೀಸ್‌ ನಮಗೆ ಒಂದು ಒಳ್ಳೆಯ ಶಾಲೆಯನ್ನ ನಿರ್ಮಿಸಿಕೊಡಿ ಅಂತ ಜಮ್ಮುಕಾಶ್ಮೀರದ ಶಾಲೆಯೊಂದ್ರ ಬಾಲಕಿ ಮನವಿ ಮಾಡಿರೊ ವಿಡಿಯೋ ಭಾರಿ ವೈರಲ್‌ ಆಗಿದೆ. ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಂತ ಪರಿಚಯಿಸಿಕೊಳ್ಳುವ ಬಾಲಕಿ 5 ನಿಮಿಷದ ವಿಡಿಯೋದಲ್ಲಿ ತನ್ನ ಶಾಲೆಯ ಪರಿಸ್ಥಿತಿಯನ್ನ ವಿವರಿಸಿದ್ದಾಳೆ. ಶಾಲೆಯ ಕಟ್ಟಡ ಅಪೂರ್ಣಗೊಂಡಿದ್ದು, ನಮ್ಮನ್ನ ಈ ಕೊಳಕಾಗಿರುವ ನೆಲದ ಮೇಲೆ ಕೂರಿಸುತ್ತಾರೆ. ನಮಗೆ ಕೂರಲು ಬೆಂಚ್‌ಗಳಿಲ್ಲ. ದೇಶದ ಎಲ್ಲರ ಮನವಿಯನ್ನ ಆಲಿಸುವ ನೀವು ನನ್ನ ಮನವಿಯನ್ನ ಕೇಳಿಸಿಕೊಂಡು ದಯವಿಟ್ಟು ನಮಗೆ ಉತ್ತಮ ಶಾಲೆಯನ್ನ ನಿರ್ಮಿಸಿಕೊಡಿ. ಅದ್ರಿಂದ ನಾವು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡ್ಬೋದು ಅಂತ ಬಾಲಕಿ ಪ್ರಧಾನಿ ಮೋದಿ ಅವ್ರ ಬಳಿ ಮನವಿ ಮಾಡಿಕೊಂಡಿದ್ದಾಳೆ.

-masthmagaa.com

Contact Us for Advertisement

Leave a Reply