ಆಂಧ್ರ ಸಿಎಂ ಬಿಗ್‌ ಅನೌನ್ಸ್‌ಮೆಂಟ್‌! ಹೊಸ ರಾಜಧಾನಿಯಾಗಲಿದೆ ವಿಶಾಖಪಟ್ಟಂ!

masthmagaa.com:

ವಿಶಾಖಪಟ್ಟಣಂ ಆಂಧ್ರ ಪ್ರದೇಶದ ಹೊಸ ರಾಜಧಾನಿಯಾಗಲಿದೆ. ಮುಂದಿನ ದಿನಗಳಲ್ಲಿ ನಾವು ಕೂಡ ಅಲ್ಲಿಗೆ ಶಿಪ್ಟ್‌ ಆಗ್ತೀವಿ ಅಂತ ಆಂಧ್ರ ಸಿಎಂ ಜಗನ್ಮೋಹನ್‌ ರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ. ಅಲ್ದೇ ಮಾರ್ಚ್‌ನಲ್ಲಿ ಅಲ್ಲೇ ಜಾಗತಿಕ ಹೂಡಿಕೆದಾರರ ಶೃಂಗಸಭೆ ಆಯೋಜನೆ ಮಾಡ್ತೇವೆ ಅಂತ ಹೇಳಿದ್ದಾರೆ. ಅಂದ್ಹಾಗೆ ಅಖಂಡ ಆಂಧ್ರದ ವಿಭಜನೆಯ ಬಳಿಕ ಹೈದ್ರಾಬಾದ್‌ ತೆಲಂಗಾಣದ ರಾಜಧಾನಿ ಆಯ್ತು. ಹೀಗಾಗಿ ಈ ಹಿಂದೆ ಆಂಧ್ರ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅಮರಾವತಿಯನ್ನು ಹೊಸ ರಾಜಧಾನಿಯಾಗಿ ಘೋಷಣೆ ಮಾಡಿದ್ರು. ಅಭಿವೃದ್ಧಿ ಕಾಮಗಾರಿ ಕೂಡ ನಡೆದಿತ್ತು. ಆದರೆ ಅನಂತರ ಬಂದ ಜಗನ್‌ ಸರ್ಕಾರ 3 ರಾಜಧಾನಿಗಳನ್ನು ಘೋಷಣೆ ಮಾಡಿತ್ತು. ಅಮರಾವತಿಯನ್ನ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಂನ್ನ ಕಾರ್ಯಾಂಗ ರಾಜಧಾನಿ, ಕರ್ನೂಲನ್ನ ನ್ಯಾಯಾಂಗ ರಾಜಧಾನಿಯನ್ನಾಗಿ ಘೋಷಣೆ ಮಾಡಿತ್ತು. ಆದ್ರೆ ಇದು ತೀವ್ರವಿವಾದಕ್ಕೆ ಕಾರಣವಾಗಿತ್ತು. ಈ ಪ್ರಪೊಸಲ್‌ನ್ನ ಕೂಡ ವಾಪಾಸ್ಸು ಪಡೆಯಲಾಗಿತ್ತು. ಇದೀಗ ಒಂದೇ ರಾಜಧಾನಿಯಾಗಿ ವಿಶಾಖಪಟ್ಟಣಂಅನ್ನ ಜಗನ್‌ ಘೋಷಣೆ ಮಾಡಿದ್ದಾರೆ. ಈ ವಿಶಾಖಪಟ್ಟಣಂ ಭಾರತದ ಪೂರ್ವ ಕರಾವಳಿಯಲ್ಲಿರೋ ಅತಿದೊಡ್ಡ ಬಂದರು ನಗರ ಕೂಡ ಹೌದು. ವಿಸ್ತೀರ್ಣದಲ್ಲಿ ಕಲ್ಕತ್ತಾಕ್ಕಿಂತ ಮೂರು ಪಟ್ಟು ದೊಡ್ಡದಿರೋ ಈ ನಗರ ಆರ್ಥಿಕವಾಗಿ ಮಾತ್ರ ಅಲ್ಲದೇ ರಕ್ಷಣಾ ದೃಷ್ಟಿಯಿಂದಲೂ ತುಂಬಾ ಇಂಪಾರ್ಟೆಂಟ್‌ ಸಿಟಿ. ಹೀಗಾಗಿ ದಕ್ಷಿಣ ಭಾರತದಲ್ಲಿ, ತಮಿಳುನಾಡು ಕೇರಳದ ಬಳಿಕ ಆಂಧ್ರ ಕೂಡ ಕರಾವಳಿ ನಗರವನ್ನ ರಾಜಧಾನಿ ಮಾಡಿಕೊಳ್ಳೊದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply