ಯುಕ್ರೇನ್‌-ರಷ್ಯಾ ಯುದ್ಧ: ಪುಟಿನ್‌ಗೆ ಕಾಡುತ್ತಿದೆಯಾ ಸೋಲುವ ಭಯ?

masthmagaa.com:

ರಷ್ಯಾ ಮತ್ತು ಯುಕ್ರೇನ್‌ ಯುದ್ಧದ ಕುರಿತು ಆಘಾತಕಾರಿ ಮಾಹಿತಿಯೊಂದು ತಿಳಿದು ಬಂದಿದೆ. ಒಂದು ವರ್ಷದಿಂದ ನಿರಂತರವಾಗಿ ಯುಕ್ರೇನ್‌ ಮೇಲೆ ದಾಳಿ ಮಾಡ್ತಿರೊ ರಷ್ಯಾ, ಇದೀಗ ಯುಕ್ರೇನ್‌ ಮೇಲೆ ಅತಿದೊಡ್ಡ ಸಾಮೂಹಿಕ ಆತ್ಮಾಹುತಿ ದಾಳಿಗಳನ್ನ ಮಾಡೋಕೆ ಪ್ಲಾನ್‌ ಮಾಡ್ತಿದೆ ಅಂತ ಬ್ರಿಟಿಷ್‌ ಮಾಧ್ಯಮ ವರದಿ ಮಾಡಿದೆ. ಯುದ್ಧದಲ್ಲಿ ರಷ್ಯಾ ಸೋಲೊ ಲಕ್ಷಣಗಳು ಕಾಣುತ್ತಿರೊ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ದೊಡ್ಡದಾಗಿ ಯೋಜನೆ ಹಾಕಿಕೊಳ್ತಿದಾರೆ. ಅಲ್ದೇ ಈ ಸಾಮೂಹಿಕ ಆತ್ಮಹತ್ಯಾ ದಾಳಿಯ ಆದೇಶವನ್ನ ಮುಂದಿನ 3 ತಿಂಗಳಲ್ಲಿ ಪುಟಿನ್‌ ನೀಡಬಹುದು ಎನ್ನಲಾಗಿದೆ. ಈಗಾಗಲೇ ಯುದ್ಧದಲ್ಲಿ 200 ಯುದ್ಧ ವಿಮಾನಗಳನ್ನ ರಷ್ಯಾ ಕಳೆದುಕೊಂಡಿದೆ ಹಾಗೂ ಪುಟಿನ್‌ಗೆ ಯುದ್ಧದಲ್ಲಿ ಸೋಲುವ ಭೀತಿ ಕೂಡ ಎದುರಾಗಿದೆ. ಯಾಕಂದ್ರೆ ನಿರಂತರವಾಗಿ ಯುದ್ದ ಮಾಡ್ತಿರೊ ರಷ್ಯಾ ಸೇನೆ ಮಿಲಿಟರಿ ದುರ್ಬಲವಾಗಿದೆ. ಹೀಗಾಗಿ ಪುಟಿನ್ ಈ ನಿರ್ಧಾರವನ್ನ ತೆಗೆದುಕೊಳ್ಳಬಹುದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply