ರಷ್ಯಾ-ಯುಕ್ರೇನ್‌ ಕದನವಿರಾಮಕ್ಕೆ ಸಿಗ್ನಲ್‌ ಮಾಡ್ತಿದ್ದಾರಾ ಪುಟಿನ್‌?

masthmagaa.com:

ಇನ್ನು ಇದೇ ಪುಟಿನ್‌ ಈಗ ರಷ್ಯಾ ಮತ್ತು ಯುಕ್ರೇನ್‌ ನಡುವೆ ಕದನವಿರಾಮ ಮಾಡೋ ಬಗ್ಗೆ ಹಿಂಟ್ ನೀಡ್ತಿದ್ದಾರೆ ಅಂತ ಅಮೆರಿಕದ ಪತ್ರಿಕೆಯೊಂದು ರಿಪೋರ್ಟ್‌ ಮಾಡಿದೆ. ಕೆಲ ದಿನಗಳ ಹಿಂದಷೇ ತಮ್ಮ ಸೇನಾಧಿಕಾರಿಗಳನ್ನ ಉದ್ದೇಶಿಸಿ ಮಾತನಾಡಿದ ಪುಟಿನ್‌, ‘ಯುಕ್ರೇನ್‌ಗೆ ನೆಗೋಶಿಯೇಟ್‌ ಮಾಡೋಕೆ ಇಷ್ಟ ಇದ್ರೆ ಮಾಡ್ಲಿ’ ಅಂತ ಹೇಳಿದ್ರು. ಈ ಮೂಲಕ ರಷ್ಯಾ-ಯುಕ್ರೇನ್‌ ಮಧ್ಯ ನಡೀತಿರೋ ಯುದ್ಧದಿಂದ ಹಿಂದಕ್ಕೆ ಹೋಗೋ ಬಗ್ಗೆ ಪುಟಿನ್‌ ನೇರವಾಗಿ ಪಬ್ಲಿಕ್‌ನಲ್ಲಿ ಹೇಳಿಲ್ಲ. ಆದ್ರೆ ಈ ಬಗ್ಗೆ ಮೌನವಾಗೇ ಸಿಗ್ನಲ್‌ ನೀಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ರಷ್ಯಾದ ಹಿರಿಯ ಅಧಿಕಾರಿಯೊಬ್ರು ನೀಡಿರೋ ಹೇಳಿಕೆ ಈ ಗುಮಾನಿಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ. ಸೆಪ್ಟೆಂಬರ್‌ ತಿಂಗಳಿಂದ್ಲೇ ರಷ್ಯಾ-ಯುಕ್ರೇನ್‌ ಯುದ್ಧ ನಿಲ್ಲಿಸೋ ಬಗ್ಗೆ ಪುಟಿನ್‌ ಸಿಗ್ನಲ್‌ ನೀಡ್ತಿದ್ರು ಅಂತ ಈ ಹಿರಿಯ ಅಧಿಕಾರಿ ಹೇಳಿಕೆ ನೀಡಿದ್ರು. ಆದ್ರೆ ಇವುಗಳೆಲ್ಲಾ ಕೇವಲ ಗೆಸ್‌ ವರ್ಕ್‌ ಅಷ್ಟೇ. ಈ ಬಗ್ಗೆ ಯಾವ್ದೇ ರೀತಿ ಕ್ಲಾರಿಟಿಗಳಿಲ್ಲ.

-masthmagaa.com

Contact Us for Advertisement

Leave a Reply