ಇಂಡೋನೇಷ್ಯಾದ ಮೌಂಟ್‌ ಮೆರಾಪಿಯಲ್ಲಿ ಜ್ವಾಲಾಮುಖಿ ಸ್ಫೋಟ!

masthmagaa.com:

ಇಂಡೋನೇಷ್ಯಾದ ಮೌಂಟ್‌ ಮೆರಾಪಿಯಲ್ಲಿ ಇದೀಗ ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟಿಸಿದೆ. ಪರಿಣಾಮ ದಟ್ಟವಾದ ಹೊಗೆ ಮತ್ತು ಬೂದಿ, ಗಾಳಿ ಜೊತೆ ಸೇರ್ಕೊಂಡಿದೆ. ಸುಮಾರು 1,300 ಮೀಟರ್‌ ಎತ್ತರಕ್ಕೆ ಇದ್ರ ಬೂದಿ ಚಿಮ್ಮಿದೆ ಅಂತ ಹೇಳಲಾಗ್ತಿದೆ. ಸದ್ಯ ಜ್ವಾಲಮುಖಿ ಸ್ಫೋಟದಿಂದಾಗಿ ಇಲ್ಲಿಯವರೆಗೆ ಯಾವ್ದೇ ರೀತಿ ಪ್ರಾಣ ಹಾನಿ ವರದಿಯಾಗಿಲ್ಲ. ಆದ್ರೆ ಈ ಸ್ಫೋಟದ ಹಿನ್ನಲೆ ಅಲ್ಲಿನ ಕನಿಷ್ಠ 100 ಮಂದಿ ನಿವಾಸಿಗಳನ್ನ ಜನವರಿ 12 ರಂದೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

-masthmagaa.com

Contact Us for Advertisement

Leave a Reply