ಬ್ರಿಟನ್‌ ಪ್ರಧಾನಿಯಾಗೋಕೆ ಕನ್ಸರ್ವೇಟಿವ್‌ ಪಕ್ಷದಲ್ಲಿ ರಿಷಿ ಸುನಾಕ್‌ರೇ ಫೇವರೆಟ್‌!

masthmagaa.com:

ಯುಕೆ ಪ್ರಧಾನಿ ಪಟ್ಟಕ್ಕಾಗಿ ನಡೀತಿರೋ ಹಣಾಹಣಿಯಲ್ಲಿ ಭಾರತ ಮೂಲದ ರಿಷಿ ಸುನಾಕ್‌ ಗೆಲ್ಲುವ ಸಾಧ್ಯತೆ ಜಾಸ್ತಿ ಇದೆ ಅಂತ ಸಮೀಕ್ಷೆಯೊಂದು ಹೇಳಿದೆ. ಯಾರು ಬೇಕಾದ್ರೂ ಪ್ರಧಾನಿಯಾಗಲಿ, ಆದ್ರೆ ರಿಷಿ ಮಾತ್ರ ಬೇಡ್ಬೇ ಬೇಡ ಅಂತ ಬ್ರಿಟನ್‌ ಹಂಗಾಮಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ರು. ಇದರ ನಡುವೆಯೂ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಸದಸ್ಯರಿಗೆ ರಿಷಿ ಸುನಾಕ್‌ರೇ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದಾರೆ ಅಂತ ಸಮೀಕ್ಷಾ ವರದಿಯೊಂದು ಹೇಳಿದೆ. ರಿಷಿ ಸುನಾಕ್‌ ಒಬ್ಬ ಉತ್ತಮ ಪ್ರಧಾನಿಯಾಗಬಲ್ಲರು.. ಅವರಿಗೆ ಆ ಸಾಮರ್ಥ್ಯ ಇದೆ ಅಂತ ಕನ್ಸರ್ವೇಟಿವ್‌ ಪಕ್ಷದ ಶೇ.48ರಷ್ಟು ಸದಸ್ಯರು ಅಭಿಪ್ರಾಯ ಹೊಂದಿದ್ದಾರೆ ಅಂತ ಜೆಎಲ್‌ ಪಾರ್ಟ್‌ನರ್‌ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಇದೇ ವೇಳೆ ರಿಷಿ ಅವರ ಜತೆ ರೇಸ್‌ನಲ್ಲಿರುವ ಬ್ರಿಟನ್‌ನ ವಿದೇಶಾಂಗ ಸಚಿವೆ ಲಿಜ್‌ ಟ್ರುಸ್‌ ಶೇ.39 ರಷ್ಟು ಸದಸ್ಯ ಬಲದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಶೇ.33 ರಷ್ಟು ಜನ ಪೆನ್ನಿ ಮಾರ್ಡೌಂಟ್‌ ಅವರೂ ಪ್ರಧಾನಿಯಾಗಲಿ ಅಂತ ಹೇಳಿದ್ದಾರೆ. ಅಂದ್ಹಾಗೆ ಈಗಾಗಲೇ ಪ್ರಧಾನಿ ಆಯ್ಕೆ ಸಂಬಂಧ ಕನ್ಸರ್ವೇಟಿವ್‌ ಸಂಸದರು 2 ಸುತ್ತಿನ ಮತದಾನ ಮುಗಿಸಿದ್ದು, ಎರಡೂ ಸುತ್ತಿನಲ್ಲಿಯೂ ಸುನಾಕ್‌ ಮುನ್ನಡೆಯಲ್ಲಿದ್ದಾರೆ. ಮುಂದೆ ನಡೆಯೋ ಹಲವು ಸುತ್ತಿನ ಮತದಾನದಲ್ಲೂ ಇದು ಮುಂದುವರೆದ್ರೆ ರಿಷಿ ಬೋರಿಸ್‌ರ ಉತ್ತರಾಧಿಕಾರಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply