ರಷ್ಯಾ ಖಾಸಗಿ ಸೇನೆ ವ್ಯಾಗ್ನರ್‌ ಗ್ರೂಪ್‌ನ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಜಿನ್‌ ಸತ್ತಿದ್ದಾರೆ: ಅಮೆರಿಕ

masthmagaa.com:

ಪುಟಿನ್‌ ವಿರುದ್ಧ ದಂಗೆಯೆದ್ದು ನಂತರ ತಣ್ಣಗಾಗಿದ್ದ ವ್ಯಾಗ್ನರ್‌ ಗ್ರೂಪ್‌ನ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಜಿನ್‌ ಅವ್ರು ಹತ್ಯೆಯಾಗಿರೋ ಸಾಧ್ಯತೆ ಹೆಚ್ಚಿದೆ ಅಂತ ಅಮೆರಿಕ ಹೇಳಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧದ ದಂಗೆ ವಿಫಲವಾದ ನಂತ್ರ ಪ್ರಿಗೋಜಿನ್‌ ಮೃತಪಟ್ಟಿರಬೇಕು ಅಥ್ವಾ ಜೈಲಿನಲ್ಲಿರಬಹುದು ಅಂತ ಅಮೆರಿಕ ಮಾಜಿ ಮಿಲಿಟರಿ ಅಧಿಕಾರಿ ರಾಬರ್ಟ್‌ ಅಬ್ರಾಮ್ಸ್‌ ಅವ್ರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವೇಳೆ ನಾವು ಮತ್ತೆ ಪ್ರಿಗೋಜಿನ್‌ರನ್ನ ಸಾರ್ವಜನಿಕವಾಗಿ ನೋಡೋದು ಅನುಮಾನ ಅಂತ ರಾಬರ್ಟ್‌ ಹೇಳಿದ್ದಾರೆ. ಅಂದ್ಹಾಗೆ ಮೊನ್ನಯಷ್ಟೆ ದಂಗೆಯಾದ 5 ದಿನಗಳ ಬಳಿಕ ಪುಟಿನ್‌ ಹಾಗೂ ಪ್ರಿಗೋಜಿನ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು ಅಂತ ರಷ್ಯಾ ಹೇಳಿತ್ತು. ಇದೀಗ ಅಮೆರಿಕ ಮಿಲಿಟರಿ ಅಧಿಕಾರಿ ಈ ರೀತಿ ಹೇಳ್ತಿರೋದು ನೋಡಿದ್ರೆ ಪ್ರಿಗೋಜಿನ್‌ ಬದುಕಿರೋ ಬಗ್ಗೆ ಇರುವ ಅನುಮಾನಗಳು ಇನ್ನಷ್ಟು ದಟ್ಟವಾಗ್ತಿವೆ. ಇನ್ನೊಂದ್‌ ಕಡೆ ರಷ್ಯಾ – ಯುಕ್ರೇನ್‌ ಯುದ್ದದಲ್ಲಿ ಪುಟಿನ್‌ ಈಗಗಾಲೇ ಸೋತಿದ್ದಾರೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply