ಕೊರೋನಾ ಕಂಟಕ: ಹ್ಯಾಂಡ್​ ವಾಶ್​​ ಬಗ್ಗೆ ಕೇರಳ ಪೊಲೀಸರ ಡ್ಯಾನ್ಸ್..!

masthmagaa.com:

ಕೇರಳ: ಕೊರೋನಾ ವೈರಸ್ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜೊತೆಗೆ ಕೆಲವೊಂದು ಸಲಹೆಗಳನ್ನು ನೀಡಿದ್ದು, ಆಗಾಗ ಸಾಬೂನಿನ ಮೂಲಕ ಕೈ ತೊಳೆಯೋ ಅಭ್ಯಾಸದ ಮೂಲಕ ವೈರಸ್ ಹರಡದಂತೆ ತಡೆಯಬಹುದು ಎಂದು ಹೇಳಿದೆ.

ಹೀಗಾಗಿ ಕೇರಳ ಪೊಲೀಸರು ಹ್ಯಾಂಡ್​​ವಾಶ್ ಬಗ್ಗೆ ಜಾಗೃತಿ ಮೂಡಿಸಲು ಒಂದು ವಿಡಿಯೋ ಮಾಡಿದ್ದಾರೆ. ಇದರಲ್ಲಿ 6 ಮಂದಿ ಪೊಲೀಸರು ಡ್ಯಾನ್ಸ್ ಮಾಡುವ ಮೂಲಕ ಹ್ಯಾಂಡ್ ವಾಶ್ ಮಾಡುವ ಸರಿಯಾದ ರೀತಿಯನ್ನು ತಿಳಿಸಿದ್ದಾರೆ. ಈ ವಿಡಿಯೋವನ್ನು ಸ್ಟೇಟ್ ಪೊಲೀಸ್ ಮೀಡಿಯಾ ಸೆಂಟರ್ ಕೇರಳ ಎಂಬ ಫೇಸ್​​ಬುಕ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

1 ನಿಮಿಷ 4 ಸೆಕೆಂಡ್ ಇರುವ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್​ಗಳು ಹರಿದು ಬಂದಿವೆ. ಈ ವಿಡಿಯೋದಲ್ಲಿ ಪೊಲೀಸರು ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ಕಲಕ್ಕತಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

-masthmagaa.com

https://www.facebook.com/statepolicemediacentrekerala/videos/240901263736432/

Contact Us for Advertisement

Leave a Reply