ಭಾರತೀಯ ರೈಲ್ವೆ ನಾಶವಾಗಿ ಹೋಗಿದೆ ಎಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

masthmagaa.com:

ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸೋ ಪದ್ಧತಿಯನ್ನ ನಿಲ್ಲಿಸಿದ ದಿನವೇ ಭಾರತೀಯ ರೈಲ್ವೆ ನಾಶವಾಯಿತು ಅಂತ ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವ್ರು ವಾಗ್ದಾಳಿ ನಡೆಸಿದ್ದಾರೆ. ನಾನು ರೈಲ್ವೆ ಸಚಿವೆಯಾಗಿದ್ದಾಗ, ಹಣಕಾಸು, ಉದ್ಯೋಗಿ ಕಲ್ಯಾಣ, ಸಿಗ್ನಲಿಂಗ್, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ವಿವಿಧ ರೈಲ್ವೆ ಇಲಾಖೆಗಳಿಗೆ ಕ್ಯಾಬಿನೆಟ್ ಶ್ರೇಣಿಯ 6 ಕಾರ್ಯದರ್ಶಿಗಳನ್ನು ಹೊಂದುವ ಆಯ್ಕೆ ನೀಡಲಾಗಿತ್ತು. ಈ ಕಾರ್ಯದರ್ಶಿಗಳು ವಿವಿಧ ಇಲಾಖೆಗಳಿಗೆ ತಮ್ಮ ಸಹಕಾರ ನೀಡಿ ಸಹಾಯ ಮಾಡ್ತಿದ್ರು. ಆದ್ರೆ ಈಗ ಈ ಸಹಕಾರದ ಮನೋಭಾವನೆ ಹೋಗಿದೆ ಅಂತ ಬ್ಯಾನರ್ಜಿ ಹೇಳಿದ್ದಾರೆ. ಇದೇ ವೇಳೆ ರೈಲ್ವೆಗಾಗಿಯೇ ಸೆಪರೇಟ್‌ ಆಗಿ ಬಜೆಟ್ ಮಂಡಿಸೋದನ್ನ ನಿಲ್ಲಿಸಿದ ದಿನವೇ ಭಾರತೀಯ ರೈಲ್ವೇ ನಾಶ ಆಗಿದೆ. ಇತ್ತೀಚೆಗೆ ಯಾರೂ ಈ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜೊತೆಗೆ ಜೂನ್‌ 2ರಂದು ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತದ ಹಿಂದಿನ ಸತ್ಯವನ್ನ ಮುಚ್ಚಿಡೋಕೆ ಕೇಂದ್ರ ಸರ್ಕಾರ ಪ್ರಯತ್ನ ಪಡ್ತಿದೆ ಅಂತ ಆರೋಪಿಸಿದ್ದಾರೆ. ಜೊತೆಗೆ ಅಪಘಾತದ ಸತ್ಯ ಹೊರಬರಬೇಕು ಅಂತ ದೀದಿ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply