ಓವೈಸಿಗೆ ಶಾಕ್​: ಪಕ್ಷದ ರಾಜ್ಯಾಧ್ಯಕ್ಷರೇ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಸೇರ್ಪಡೆ

masthmagaa.com:

ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರೋ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಇಷ್ಟುದಿನ ಮಮತಾ ಬ್ಯಾನರ್ಜಿ ಅವರ TMC ಪಕ್ಷಕ್ಕೆ ಗುಡ್​ಬೈ ಹೇಳಿ BJPಗೆ ಸೇರ್ಪಡೆಯಾಗುವ ಬಗ್ಗೆ ವರದಿಯಾಗ್ತಿತ್ತು. ಆದ್ರಿವತ್ತು ಅಸಾದುದ್ದಿನ್ ಓವೈಸಿ ಅವರ AIMIM ಪಕ್ಷದ ರಾಜ್ಯಾಧ್ಯಕ್ಷ ಎಸ್​.ಕೆ. ಅಬ್ದುಲ್ ಕಲಾಂ ಎಂಬುವವರು TMC ಪಕ್ಷಕ್ಕೆ ಸೇರಿದ್ದಾರೆ. ತಮ್ಮ ಜೊತೆಗೆ AIMIM ಪಕ್ಷದ ಇನ್ನೊಂದಷ್ಟು ಜನರನ್ನ ಕೂಡ ಟಿಎಂಸಿಗೆ ಕರ್ಕೊಂಡ್​ ಬಂದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರೇ ಇನ್ನೊಂದು ಪಕ್ಷಕ್ಕೆ ಸೇರಿರೋದು ಓವೈಸಿಗೆ ಮತ್ತು ಅವರ AIMIM ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

-masthmagaa.com

Contact Us for Advertisement

Leave a Reply