ಪಾಕ್‌ ಜೊತೆ ಆಡಬೇಡಿ ಎಂದು ಭಾರತ ತಂಡಕ್ಕೆ ಸೂಚಿಸಿದ ಅಸಾದುದ್ದೀನ್‌ ಓವೈಸಿ!

masthmagaa.com:

ಏಷ್ಯಾ ಕಪ್‌ ಆಡೋಕೆ ತಂಡವನ್ನ ಪಾಕಿಸ್ತಾನಕ್ಕೆ ಕಳಿಸಲ್ಲ ಅನ್ನೊ ವಿಚಾರವಾಗಿ ಹೈದರಾಬಾದ್‌ ಸಂಸದ, AIMIMನ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಪ್ರತಿಕ್ರಿಯಿಸಿದ್ದಾರೆ. ಪಾಕ್‌ಗೆ ತಂಡವನ್ನ ಕಳಸಲ್ಲ ಅಂತಾದ್ರೆ, ಆಸ್ಟ್ರೇಲಿಯಾದಲ್ಲಿ ಪಾಕ್‌ ವಿರುದ್ದ ಭಾರತ ತಂಡ ಯಾಕೆ ಆಡ್ತಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಪಾಕ್‌ಗೆ ಹೋಗಲ್ಲ ಅಂತಾದ್ರೆ, ಆಸ್ಟ್ರೇಲಿಯಾದಲ್ಲಿ ಪಾಕ್‌ ವಿರುದ್ದ ಆಟ ಆಡೋದಕ್ಕೆ ಏನ್‌ ಅರ್ಥ. ಇದು ಯಾವ ಪ್ರೀತಿ? ಪಾಕ್‌ ಜೊತೆ ಆಡಬೇಡಿ. ಆಡ್ಲಿಲ್ಲ ಅಂದ್ರೆ ಏನಾಗುತ್ತೆ. ಟಿವಿ ಚಾನಲ್‌ಗೆ 2000 ಕೋಟಿ ನಷ್ಟ. ದೇಶಕ್ಕಿಂತ ಹೆಚ್ಚೆನಲ್ಲ. ಆಡೋದು ಬೇಡ ಅಂತ ಹೇಳಿದ್ದಾರೆ. ಜೊತೆಗೆ ನಿಮಗೆ ನಮ್ಮ ಹಿಜಾಬ್ , ನಮ್ಮ ಗಡ್ಡ ಮತ್ತು ನಮ್ಮ ಕ್ರಿಕೆಟ್‌ನಲ್ಲಿಯೂ ಸಮಸ್ಯೆ ಕಾಣ್ತಿದೆ’ ಅಂತ ಓವೈಸಿ ಆರೋಪಿಸಿದ್ದಾರೆ. ಅಂದ್ಹಾಗೆ ಟಿ-20 ವಿಶ್ವಕಪ್‌ನ ಸೂಪರ್‌ 12 ಲೀಗ್‌ನ ನಾಳೆ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಮುಖಾಮಖಿಯಾಗಲಿವೆ. ಈ ಮ್ಯಾಚ್‌ ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ರಿಂದ ಪಂದ್ಯ ಶುರುವಾಗಲಿದೆ. ಟಾಸ್‌ ಅರ್ಧ ಗಂಟೆ ಮೊದಲು ಅಂದ್ರೆ 1 ಗಂಟೆಗೆ ನಡೆಯಲಿದೆ.

-masthmagaa.com

Contact Us for Advertisement

Leave a Reply