4 ದಿನದಲ್ಲಿ ಕಾಬೂಲ್ ಮುಖ ಚಹರೆ ಬದಲಿಸಿದ ತಾಲಿಬಾನ್!

masthmagaa.com:

ಕಾಬೂಲ್ ಏರ್​ಪೋರ್ಟ್​​ನಲ್ಲಿ ಅಫ್ಘಾನಿಸ್ತಾನದ ಜನ ಯಾವ ರೀತಿ ಬಂದು ದೇಶ ತೊರೆಯಲು ಮುಂದಾಗ್ತಿದ್ದಾರೆ ಅಂತ ನೀವೆಲ್ಲಾ ನೋಡೇ ಇರ್ತೀರಿ. ಇದೀಗ ತಾಲಿಬಾನಿಗಳು ಎಲ್ಲಾ ಅಫ್ಘಾನಿಸ್ತಾನದ ಪ್ರಜೆಗಳು ಕಾಬೂಲ್ ಏರ್​ಪೋರ್ಟ್​​ನಿಂದ ಹೊರಬರಬೇಕು ಅಂತ ಆದೇಶ ಹೊರಡಿಸಿದ್ದಾರೆ. ನಾವು ಯಾರಿಗೂ ಯಾವುದೇ ರೀತಿಯ ಹಾನಿ ಮಾಡುವ ಉದ್ದೇಶ ಹೊಂದಿಲ್ಲ ಅಂತ ಕೂಡ ಭರವಸೆ ನೀಡಿದ್ದಾರೆ. ನಿನ್ನೆಯಷ್ಟೇ ಇದೇ ತಾಲಿಬಾನಿಗಳು ಜಲಾಲಾಬಾದ್​ನಲ್ಲಿ ಗುಂಡಿಟ್ಟು ಮೂವರನ್ನು ಹತ್ಯೆ ಮಾಡಿದ್ರು.

ಕಾಬೂಲನ್ನು ಕಂಟ್ರೋಲ್​​ಗೆ ತಗೊಂಡ ಕೂಡಲೇ ಅದ್ರ ಚಿತ್ರಣವನ್ನೇ ಚೇಂಜ್ ಮಾಡ್ತಿದ್ಧಾರೆ. ಮೂರ್ನಾಲ್ಕು ದಿನಗಳಲ್ಲಿ ಕಾಬೂಲ್ ಮೂತಿಯೇ ಬದಲಾಗಿ ಹೋಗಿದೆ. ಎಲ್ಲಾ ಅಂಗಡಿಗಳ ಮುಂದಿನ ಮಹಿಳೆಯರ ಫೋಟೋಗಳನ್ನು ತಾಲಿಬಾನಿಗಳು ತೆಗೆದು ಹಾಕಿದ್ದಾರೆ.. ಅಥವಾ ಒಡೆದೇ ಹಾಕಿದ್ದಾರೆ. ಒಟ್ನಲ್ಲಿ 3 ದಿನದ ಹಿಂದಿನ ಕಾಬೂಲ್​​ಗೂ ಈಗಿನ ಕಾಬೂಲ್​​ಗು ತುಂಬಾ ವ್ಯತ್ಯಾಸ ಕಾಣ್ತಾ ಇದೆ.
-masthmagaa.com

Contact Us for Advertisement

Leave a Reply