ಜಾಕ್‌ ಮಾ ಸೇಫ್‌… ದ್ವೀಪದಲ್ಲಿ ಡ್ರಾಯಿಂಗ್‌, ಗಾಲ್ಫ್ ಆಟ!

masthmagaa.com:

ಚೀನಾದ ಮಲ್ಟಿ ಬಿಲಿಯನೇರ್​​​ ಜಾಕ್ ಮಾ ಸೇಫಾಗಿದ್ದಾರೆ ಅಂತ ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ಜಾಕ್ ಮಾ ಹಾಗೂ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಮಧ್ಯೆ ಕಿತ್ತಾಟ ಮಿತಿಮೀರಿತ್ತು. ಚೀನಾ ಸರ್ಕಾರದ ಕಮ್ಯೂನಿಸ್ಟ್ ನೀತಿಗಳನ್ನ ಜಾಕ್ ಮಾ ಟೀಕಿಸಿದ್ದರು. ಇದರ ಪರಿಣಾಮ ಜಿನ್​ಪಿಂಗ್ ಸರ್ಕಾರ ಜಾಕ್ ಒಡೆತನದ ಅಲಿಬಾಬಾ ಹಾಗೂ ಆಂಟ್ ಗ್ರೂಪ್ ಕಂಪನಿಗಳ ಮೇಲೆ ದಾಳಿ ಶುರು ಮಾಡಿತ್ತು. ಅದಾದ ಮೇಲೆ ಜಾಕ್ ಮಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದು ಸಲ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಕಾಣಿಸಿಕೊಂಡಿದ್ದರೂ, ಅದು ಎಲ್ಲಿಂದ ಅನ್ನೋದು ಗೊತ್ತಾಗಿರಲಿಲ್ಲ.

ಆದ್ರೆ ಈಗ ಹೈನಾನ್ ದ್ವೀಪದಲ್ಲಿರೋ ಸನ್ ವ್ಯಾಲಿ ಗಾಲ್ಫ್ ರೆಸಾರ್ಟ್​ನಲ್ಲಿ ಗಾಲ್ಫ್ ಆಡುತ್ತಾ ವಿಶ್ರಾಂತಿ ಪಡೀತಿದ್ದಾರೆ ಅಂತ ಗೊತ್ತಾಗಿದೆ. ಚೀನಾದ ದಕ್ಚಿಣ ಭಾಗದಲ್ಲಿರೋ ದ್ವೀಪ ಇದು..ಹೈನಾನ್ ಐಲ್ಯಾಂಡ್. ತನ್ನ ಸುಂದರ ಹಸಿರು ಹಾಗೂ ಸಮುದ್ರ ಕಿನಾರೆಗಳಿಂದಲೇ ಫೇಮಸ್​​… ಇಲ್ಲಿ ಜಾಕ್ ಮಾ ತಂಗಿದ್ದಾರೆ. ಹಾಗೂ ಜಪಾನ್​ನ ಸಾಫ್ಟ್​ ಬ್ಯಾಂಕ್​​ ಕಾರ್ಪೋರೇಷನ್ ನ ಫೌಂಡರ್​​ ಮಾಯಸೋಷಿ ಸೋನ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಅಂತ ಗೊತ್ತಾಗಿದೆ. ಜಾಕ್​ ಮಾ ಮತ್ತು ನಾನು ಆಗಾಗಾ ಚಾಟ್ ಮಾಡ್ತಿದ್ವಿ. ಜಾಕ್ ನನಗೆ ಅವರೇ ಬಿಡಿಸಿದ ಡ್ರಾಯಿಂಗ್​ಗಳನ್ನ ಕೂಡ ಕಳಿಸ್ತಿದ್ರು ಅಂತ ಮಾಯಸೋಷಿ ಸೋನ್ ಹೇಳಿದ್ದಾರೆ. ಈ ಸಾಫ್ಟ್​ಬ್ಯಾಂಕ್​ನ ಮಾಯಾಸೋಷಿ ಸೋನ್, ಅಲಿಬಾಬಾ ಕಂಪನಿಯಲ್ಲಿ ಆರಂಭದ ದಿನಗಳಲ್ಲೇ ಬಂಡವಾಳ ಹೂಡಿದ್ದರು. ಇವರು ಜಾಕ್​ ಮಾ ಅವರ ಬಹುಕಾಲದ ಗೆಳೆಯ ಕೂಡ ಹೌದು.

-masthmagaa.com

Contact Us for Advertisement

Leave a Reply