ರಾಮಲಲ್ಲಾ ಮೂರ್ತಿ ಕೆತ್ತಿರೋ ಕಲ್ಲು ಸಿಕ್ಕ ಸ್ಥಳದಲ್ಲಿ ರಾಮನ ದೇವಸ್ಥಾನ!

masthmagaa.com:

ಅಯೋಧ್ಯೆ ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನಕ್ಕೆ ಮೂರು ಲೇಯರ್‌ಗಳ ಭದ್ರತೆ ಒದಗಿಸಲಾಗಿದೆ. CRPF ಪಡೆಗಳು, ಯುಪಿ ಸರ್ಕಾರದ ಸ್ಪೆಷಲ್‌ ಸೆಕ್ಯೂರಿಟಿ ಫೋರ್ಸ್‌ (SSF) ಹಾಗೂ ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬುಲರಿಗಳನ್ನ ನಿಯೋಜಿಸಲಾಗಿದೆ. ಇವರ ಜೊತೆಗೆ ಯುಪಿ ಪೋಲೀಸರು ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆ ರಾಮಮಂದಿರದ ಸೆಕ್ಯೂರಿಟಿ ಬಗ್ಗೇನೆ ಒಂದು ವರದಿ ಮಾಡಿದ್ದೇವೆ ನೀವದನ್ನ ನೋಡ್ಬೋದು. ಇನ್ನು ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ರಾಮಲಲ್ಲಾ ಫೋಟೋ ಸೋರಿಕೆಯಾದ ಬಗ್ಗೆ, ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್‌ ರಿಯಾಕ್ಟ್‌ ಮಾಡಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ರಾಮಲಲ್ಲಾ ವಿಗ್ರಹದ ಫೋಟೋ ಲೀಕ್‌ ಆಗಿರೋದು ತಪ್ಪು. ಅದ್ರಲ್ಲೂ ಮೂರ್ತಿಯ ಕಣ್ಣುಗಳನ್ನ ಕಾರ್ಯಕ್ರಮ ಮುಗಿಯೋ ವರೆಗೆ ಯಾರೂ ನೋಡ್ಬಾರ್ದು. ಈ ಬಗ್ಗೆ ತನಿಖೆಯಾಗ್ಬೇಕು ಅಂತ ಆಚಾರ್ಯರು ಆಗ್ರಹಿಸಿದ್ದಾರೆ. ಇನ್ನು ರಾಮಲಲ್ಲಾ ಮೂರ್ತಿ ಕೆತ್ತೋಕೆ ಬಳಸಲಾದ ಕೃಷ್ಣ ಶಿಲೆ ಸಿಕ್ಕಿದ ಜಾಗದಲ್ಲಿ ದೇವಸ್ಥಾನ ಕಟ್ಟೋದಾಗಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಮೈಸೂರು ತಾಲೂಕ್ಕಿನ ಆರೋಹಳ್ಳಿಯ ದಲಿತ ಮುಖಂಡರೊಬ್ಬರಿಗೆ ಸೇರಿದ ಜಾಗದಲ್ಲಿ ಈ ಕಲ್ಲು ಸಿಕ್ಕಿದೆ. ಇದೇ ಸ್ಥಳದಲ್ಲಿ ರಾಮನ ದೇವಸ್ಥಾನ ಕಟ್ಟುತ್ತೇವೆ ಅಂದಿದ್ದಾರೆ. ಇನ್ನು ರಾಮಮಂದಿರ ಕಾರ್ಯಕ್ರಮಕ್ಕೆ ಮಹಿಳಾ ಕ್ರಿಕೆಟಿಗರಾದ ಮಿಥಾಲಿ ರಾಜ್‌ ಹಾಗೂ ಹರ್ಮನ್‌ ಪ್ರೀತ್‌ ಕೌರ್‌ ಅವ್ರಿಗೆ ಆಹ್ವಾನ ನೀಡಲಾಗಿದೆ. ಇನ್ನು ಪ್ರಾಣ ಪ್ರತಿಷ್ಠಾಪನೆಗೆ ಸ್ವೀಟ್‌ಗಳ ಮಹಾಪೂರ ಹರಿಯಲಿದೆ. ಸ್ಪೆಷಲ್‌ ತೆಪ್ಲಾ, ಬಾದಾಮಿ ಸ್ವೀಟ್‌ಗಳು, ಮಟರ್‌ ಕಚೋರಿ ಸೇರಿದಂತೆ 56 ಬಗೆಯ ಖಾದ್ಯಗಳು ರಾಮಲಲ್ಲಾನಿಗಾಗಿ ತಯಾರಾಗಲಿವೆ. ಇತ್ತ ಸ್ವೀಟ್ಸ್‌ ತಯಾರಾಗ್ತಿದ್ರೆ ಅತ್ತ ರಾಮ ಮಂದಿರ ಕ್ಷೇತ್ರದ ಪ್ರಸಾದ ಅಂತ ಅಮೆಜಾನ್‌ನಲ್ಲಿ ಸಿಹಿ ಮಾರಾಟ ಆಗ್ತಿದ್ದ ಬಗ್ಗೆ ಕೇಂದ್ರ ಕ್ರಮ ತಗೊಂಡಿದೆ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈ ಬಗ್ಗೆ ಅಮೆಜಾನ್‌ಗೆ ನೋಟಿಸ್‌ ನೀಡಿದೆ. ಇನ್ನು ದೇಶಿಯವಾಗಿ ತಯಾರಾಗಿರೋ ಆರೋಗ್ಯ ಮೈತ್ರಿ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಕ್ಯೂಬ್‌, ಅಥ್ವಾ BHISM ಪೋರ್ಟೆಬಲ್‌ ಆಸ್ಪತ್ರೆಗಳನ್ನ ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. ಇನ್ನು ರಾಜ್ಯಕ್ಕೆ ಬಂದ್ರೆ, ರಾಯಚೂರು ಮೂಲಕ ಮಂತ್ರಾಲಯಕ್ಕೆ ಮಾರ್ಗ ಕಲ್ಪಿಸೋ ಹೈವೇ ಬಳಿ 36 ಅಡಿ ಎತ್ತರದ ಅಭಯ ರಾಮರ ಏಕಶಿಲಾ ಮೂರ್ತಿ ಸ್ಥಾಪಿಸಲಾಗಿದೆ. 32 ಅಡಿ ಎತ್ತರದ ಅಭಯಾಂಜನೇಯ ಮೂರ್ತಿ ಎದುರು ಈ ರಾಮರ ಪ್ರತಿಮೆಯನ್ನ ಸ್ಥಾಪಿಸಲಾಗಿದೆ. ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈ ಮೂರ್ತಿಯನ್ನ ಅನಾವರಣಗೊಳಿಸಿದ್ದಾರೆ.

-masthmagaa.com

Contact Us for Advertisement

Leave a Reply