65 ವರ್ಷ+ಗಿಂತ 50 ವರ್ಷದ ಒಳಗಿನವರಿಗೇ ಕೊರೋನಾ ಹೆಚ್ಚು ಡೇಂಜರ್​​​!

masthmagaa.com:

ಈವರೆಗೆ ಕೊರೋನಾ ವೃದ್ಧರಿಗೆ ತುಂಬಾ ಅಪಾಯಕಾರಿ.. ವಯಸ್ಸಾದವರು ಹುಷಾರಾಗಿ ಇರಬೇಕು ಅಂತೆಲ್ಲಾ ಹೇಳ್ತಿದ್ವಿ.. ಅದೇ ಕಾರಣಕ್ಕೆ ಮೊದಲಿಗೆ 65 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಿ ಲಸಿಕೆ ಕೂಡ ಹಾಕಲಾಯ್ತು. ಆದ್ರೀಗ ಕೊರೋನಾ ಬಂದು ಮರಣ ಪ್ರಮಾಣ 65 ವರ್ಷ ಮೇಲ್ಪಟ್ಟವರಿಗಿಂತ 50 ವರ್ಷ ಕೆಳಗಿನವರಲ್ಲೇ ಜಾಸ್ತಿ ಅಂತ ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ಏಮ್ಸ್​​​​​ ಕಡೆಯಿಂದ ನಡೆಸಲಾದ ಸಿಂಗಲ್ ಸೆಂಟರ್ ರೆಸ್ಟ್ರೋಸ್ಪೆಕ್ಟಿವ್ ಸ್ಟಡಿಯಲ್ಲಿ ಈ ವಿಚಾರ ಗೊತ್ತಾಗಿದೆ. ಭಾರತದ ಕ್ರಿಟಿಕಲ್ ಕೇರ್ ಮೆಡಿಸಿನ್ ಅನ್ನೋ ಜರ್ನಲ್​​ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಏಮ್ಸ್ ಮುಖ್ಯಸ್ಥ ರಣಗೀಪ್ ಗುಲೇರಿಯಾ ಸೇರಿದಂತೆ ಹಲವು ತಜ್ಞರು ಸೇರಿ ಈ ವರದಿ ಸಿದ್ಧಪಡಿಸಿದ್ಧಾರೆ. 2020ರಲ್ಲಿ ಏಪ್ರಿಲ್ 4ರಿಂದ ಜುಲೈ 24ರವರೆಗಿನ ಕೆಲವೊಂದು ರೋಗಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅದ್ರಂತೆ 654 ರೋಗಿಗಳು ಐಸಿಯುಗೆ ದಾಖಲಾಗಿದ್ದು, ಇವರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಒಂದು 18ರಿಂದ 50 ವರ್ಷ, 2ನೇದು 51ರಿಂದ 65 ವರ್ಷ.. 3ನೇದು 65 ವರ್ಷ ಮೇಲ್ಪಟ್ಟವರು.. ಇವರ ಪೈಕಿ ಒಟ್ಟಾರೆಯಾಗಿ 247 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 18ರಿಂದ 50 ವರ್ಷದವರು 42.1 ಪರ್ಸೆಂಟ್ ಇದ್ರೆ, 51ರಿಂದ 65 ವರ್ಷದವರು 34.8 ಪರ್ಸೆಂಟ್ ಇದ್ದಾರೆ. ಅದೇ ರೀತಿ 65 ವರ್ಷ ಮೇಲ್ಪಟ್ಟವರು 23.1 ಪರ್ಸೆಂಟ್ ಮಾತ್ರವೇ ಇದ್ದಾರೆ ಅಂತ ಹೇಳಿದ್ಧಾರೆ. ಇವರಲ್ಲಿ 50 ವರ್ಷ ಒಳಗಿನವರೇ ಜಾಸ್ತಿ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply