ಚೀನಾದ ಮತ್ತೊಂದು ಕೊರೋನಾ ಲಸಿಕೆಗೆ WHO ಗ್ರೀನ್ ಸಿಗ್ನಲ್!

masthmagaa.com:

ಕೊರೋನಾಗೆ ಚೀನಾದ ಸಿನೋವ್ಯಾಕ್​ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರೋ ಕೊರೋನಾವ್ಯಾಕ್ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಮೂಲಕ WHOನಿಂದ ಅನುಮೋದನೆ ಪಡೆದ ಚೀನಾದ ಎರಡನೇ ಲಸಿಕೆ ಇದಾಗಿದೆ. ಕಳೆದ ತಿಂಗಳಷ್ಟೇ ಚೀನಾದ ಸೀನೋಫಾರ್ಮ್ ಅಭಿವೃದ್ಧಿಪಡಿಸಿದ ಲಸಿಕೆಗೆ ಗ್ರೀನ್ ಸಿಗ್ನಲ್ ಕೊಡಲಾಗಿತ್ತು. ಒಟ್ಟಾರೆಯಾಗಿ WHOನಿಂದ ಅಪ್ರೂವ್ ಆದ 8ನೇ ಲಸಿಕೆ ಎನಿಸಿಕೊಂಡಿದೆ ಕೊರೋನಾವ್ಯಾಕ್. ಸಿನೋವ್ಯಾಕ್​ನ ಕೊರೋನಾವ್ಯಾಕ್​ ಲಸಿಕೆಯನ್ನ 18 ವರ್ಷ ಮೇಲ್ಪಟ್ಟವರಿಗೆ ಕೊಡ್ಬೋದು. ಈ ಲಸಿಕೆ 51 ಪರ್ಸೆಂಟ್​ನಿಂದ 84 ಪರ್ಸೆಂಟ್​ ಪರಿಣಾಮಕಾರಿ. ಯಾವುದಾದ್ರೂ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಹೀಗೆ ಗ್ರೀನ್ ಸಿಗ್ನಲ್ ಕೊಟ್ರೆ ಒಂದ್​ರೀತಿ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತೆ. ಇದರಿಂದ ಬೇರೆ ಬೇರೆ ದೇಶದ ಔಷಧ ನಿಯಂತ್ರಕರು ಕೂಡ ಆ ಲಸಿಕೆಗೆ ಅನುಮೋದನೆ ಕೊಡೋಕೆ ಮುಂದಾಗ್ತವೆ. ಇದೀಗ ಸಿನೋವ್ಯಾಕ್​ ಕಂಪನಿಯ ಎಮರ್ಜೆನ್ಸಿ ಯೂಸ್​ಗೆ ಅನುಮೋದನೆ ಸಿಕ್ಕಿರೋದ್ರಿಂದ ಅದನ್ನ ಬಡ ರಾಷ್ಟ್ರಗಳಿಗೆ ಫ್ರೀಯಾಗಿ ಕೊರೋನಾ ಲಸಿಕೆ ಪೂರೈಸುವ ಕೋವಾಕ್ಸ್ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದು. ಕೊರೋನಾ ಲಸಿಕೆಯ ರಫ್ತಿನ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿರೋದ್ರಿಂದ ಜಾಗತಿಕ ಕೋವಾಕ್ಸ್ ಕಾರ್ಯಕ್ರಮಕ್ಕೆ ಲಸಿಕೆ ಸಿಗದೆ ಸಮಸ್ಯೆ ಆಗಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಒಂದು ತಿಂಗಳ ಅಂತರದಲ್ಲಿ ಚೀನಾದ ಎರಡೆರಡು ಲಸಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಎರಡೂ ಲಸಿಕೆಗಳನ್ನ ಚೀನಾ ತನ್ನ ಪ್ರಜೆಗಳಿಗೆ ಕೊಡ್ತಿದೆ. ಜೊತೆಗೆ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೆ ರಫ್ತು ಕೂಡ ಮಾಡಿದೆ.

-masthmagaa.com

Contact Us for Advertisement

Leave a Reply